February 3, 2026

ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್ ಹಾಕಿಸಿ ಹಣ ಕೊಡದೆ ಸಿಬ್ಬಂದಿ ಮೇಲೆ ಮಚ್ಚು ಬೀಸಿದ ಪುಂಡರು; ಶಾಕಿಂಗ್ ಘಟನೆ

0
image_editor_output_image-40332667-1655024454939.jpg

ಬೆಂಗಳೂರು: ಪೆಟ್ರೋಲ್ ಹಾಕಿಸಿಕೊಂಡು ಹಣ ನೀಡದೆ ಪುಂಡರ ತಂಡ ಪೆಟ್ರೋಲ್ ಬಂಕ್ ಸಿಬ್ಬಂದಿ ಮೇಲೆ ಮಚ್ಚು ಬೀಸಿದ ಘಟನೆ ಬೆಂಗಳೂರಿನ ಬ್ಯಾಟರಾಯಪುರದಲ್ಲಿ ನಡೆದಿದೆ.

ಉದಯ್, ಕಿರಣ್​ ಬಂಧಿತ ಆರೋಪಿಗಳು. ಮತ್ತೋರ್ವ ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಆರೋಪಿಗಳು ಪೆಟ್ರೋಲ್ ಹಾಕಿಸಿ ಜೂನ್ 2ರ ರಾತ್ರಿ 9.30ರ ಸುಮಾರಿಗೆ ಬಂಕ್​ನಲ್ಲಿ ಮಚ್ಚು ಬೀಸಿ ಪರಾರಿಯಾಗಿದ್ದರು.

ಬಂಕ್ ಸಿಬ್ಬಂದಿ ಮೇಲೆ ಮಚ್ಚು ಬೀಸಿರುವ ದೃಶ್ಯ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದ್ದು, ಬಂಕ್ ಸಿಬ್ಬಂದಿ ನೀಡಿದ್ದ ದೂರಿನನ್ವಯ ಇದೀಗ ಇಬ್ಬರು ಆರೋಪಿಗಳ ಬಂಧನವಾಗಿದೆ.

Leave a Reply

Your email address will not be published. Required fields are marked *

error: Content is protected !!