ಪ್ರವಾದಿ ಮಹಮ್ಮದ್ (ಸ.ಅ)ರ ಬಗ್ಗೆ ಅವಹೇಳನಕಾರಿ ಹೇಳಿಕೆ: SDPI ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ವತಿಯಿಂದ
ಬೆಳ್ತಂಗಡಿ: ಪ್ರವಾದಿ ಮುಹಮ್ಮದ್ ಮುಸ್ತಫಾ (ಸ.ಅ)ರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಬಿ.ಜೆ.ಪಿ ರಾಷ್ಟ್ರೀಯ ವಕ್ತಾರುಗಳಾದ ನೂಪುಲ್ ಶರ್ಮ ಮತ್ತು ನವೀನ್ ಜಿಂದಾಲ್ ಶೀಘ್ರ ಬಂಧನ ಮಾಡಬೇಕು ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ತಲೆ ತಗ್ಗಿಸುವಂತೆ ಮಾಡಿದ ಬಿಜೆಪಿ ಸರ್ಕಾರ ಕ್ಷಮೆಯಾಚಿಸಬೇಕು ಎಂದು ಇಂದು SDPI ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ವತಿಯಿಂದ ಮಡಂತ್ಯಾರ್ ನ ಬಸ್ ನಿಲ್ದಾಣ ಬಳಿ ನಡೆದ ಪ್ರತಿಭಟನೆಯಲ್ಲಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ರಾಜ್ಯ ಸಮಿತಿ ಸದಸ್ಯರಾದ ರಿಯಾಜ್ ಕಡಂಬು ಒತ್ತಾಯಿಸಿದ್ದಾರೆ.


ಪ್ರತಿಭಟನೆಯಲ್ಲಿ ಬೆಳ್ತಂಗಡಿ ವಿಧಾನ ಸಭಾ ಅಧ್ಯಕ್ಷರಾದ ನಿಸಾರ್ ಕುದ್ರಡ್ಕ, ಕಾರ್ಯದರ್ಶಿ ನಿಜಾಮ್ ಗೇರುಕಟ್ಟೆ, ಉಪಾಧ್ಯಕ್ಷರಾದ ಹನೀಫ್ ಪುಂಜಾಲಕಟ್ಟೆ ವಿಧಾನಸಭಾ ಸಮಿತಿ ಸದಸ್ಯರಾದ ಹೈದರ್ ನಿರ್ಸಲ್, ಸಾಲಿ ಮದ್ದಡ್ಕ, ಪಕ್ಷದ ಬ್ಲಾಕ್ ಸಮಿತಿ ನಾಯಕರು ಹಾಗೂ ಕಾರ್ಯಕರ್ತರು ಮತ್ತಿತರು ಉಪಸ್ಥಿತರಿದ್ದರು.




