March 25, 2026

ಆಸ್ತಿ ವಿಚಾರದಲ್ಲಿ ಜಗಳ: ತಂದೆಯನ್ನೇ ಕೊಂದ ಇಬ್ಬರು ಪುತ್ರರು

0
image_editor_output_image430446801-1654854980987.jpg

ಉತ್ತರ ಪ್ರದೇಶ: ಯುಪಿಯ ಸಿದ್ಧಾರ್ಥನಗರ ಜಿಲ್ಲೆಯಲ್ಲಿ ಹಣ ಮತ್ತು ಆಸ್ತಿ ವಿಚಾರದಲ್ಲಿ ಜಗಳ ನಡೆದು ಇಬ್ಬರು ಸಹೋದರರು ತಮ್ಮ ತಂದೆಯನ್ನು ಕೊಂದ ‍ಘಟನೆ ಉತ್ತರಪ್ರದೇಶದ ಮಧುಬನ್ವಾ ಗ್ರಾಮದಲ್ಲಿ ನಡೆದಿದೆ.

ಘಟನೆಯ ಬಳಿಕ ಮೃತ ತಂದೆಯ ದೇಹವನ್ನು ಚರಂಡಿಯ ಪಕ್ಕದಲ್ಲಿ ಹೂತುಹಾಕಿ, ತಾಯಿಗೆ ತಂದೆ ಇರುವುದಾಗಿಯೂ, ಬೇರೆ ಊರಿಗೆ ಅವರನ್ನು ಕಳುಹಿಸಿರುವುದಾಗಿ ಸುಳ್ಳು ಹೇಳಿರುತ್ತಾರೆ. ಜೂನ್ 4 ರಂದು ಸಂತ್ರಸ್ತ ಪರಶುರಾಮ್ ತನ್ನ ಇಬ್ಬರು ಮಕ್ಕಳಾದ ರಾಜಾರಾಮ್ ಮತ್ತು ಸೋನು ಅವರೊಂದಿಗೆ ಮದ್ಯ ಮತ್ತು ಆಸ್ತಿಗಾಗಿ ಹಣ ಕೇಳುವ ಬಗ್ಗೆ ಜಗಳವಾಡಿದ್ದನು.

ಮರುದಿನ ತಂದೆ ಇಬ್ಬರಿಗೆ ಬೆದರಿಕೆ ಹಾಕಿದ್ದು, ಆಸ್ತಿ ಹಿಂತಿರುಗಿಸದಿದ್ದರೆ ಪೊಲೀಸರಿಗೆ ದೂರು ನೀಡುವುದಾಗಿ ಹೇಳಿ ಅವರು ಕೆಲಸಕ್ಕೆ ತೆರಳಿದ್ದರು. ಆಕ್ರೋಶಗೊಂಡ ಸಹೋದರರು ಆತನನ್ನು ಹಿಂಬಾಲಿಸಿದರು, ಅವನನ್ನು ಕೊಂದು ನಂತರ ಅವನ ದೇಹವನ್ನು ಚರಂಡಿಯ ಪಕ್ಕದಲ್ಲಿ ಹೂತಿದ್ದರು. ನಂತರ ಪ್ರತಿ ಬಾರಿ ತಾಯಿಗೆ ಸುಳ್ಳು ಹೇಳುತ್ತಾ ಬಂದಿರುತ್ತಾರೆ.

Leave a Reply

Your email address will not be published. Required fields are marked *

error: Content is protected !!