ನಕಲಿ ದಾಖಲೆ ಸೃಷ್ಟಿಸಿ ಖಾಲಿ ನಿವೇಶನಗಳ ಮಾರಾಟ:
ಮಹಿಳೆ ಸೇರಿ ಐವರು ಪೊಲೀಸರ ಬಲೆಗೆ
ಬೆಂಗಳೂರು: ನಕಲಿ ದಾಖಲೆ ಸೃಷ್ಟಿಸಿ ಖಾಲಿ ನಿವೇಶನಗಳನ್ನು ಬೇರೆಯವರಿಗೆ ಮಾರಾಟ ಮಾಡಿ ಹಣ ಸಂಪಾದಿಸುತ್ತಿದ್ದ ಮಹಿಳೆ ಸೇರಿ ಐವರು ವಿದ್ಯಾರಣ್ಯಪುರ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ದಾಸರಹಳ್ಳಿ ಅಗ್ರಹಾರ ನಿವಾಸಿ ರೇಣುಗೋಪಾಲ್ (49), ಗೌರಮ್ಮ (48), ಶಂಕರ್(44), ರಾಜಾಜಿನಗರ ನಿವಾಸಿ ಎಂ.ಪ್ರಕಾಶ್(50) ಮತ್ತು ವಿದ್ಯಾರಣ್ಯಪುರ ನಿವಾಸಿ ಆರ್.ಶಾಂತರಾಜು (44) ಬಂಧಿತರು. ಆರೋಪಿಗಳಿಂದ ನಕಲಿ ಆಧಾರ್ ಕಾರ್ಡ್, ಪಾನ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್ ಪತ್ರಗಳಿಗೆ ನೋಂದಾಯಿತ ಕಾಗದ ಪತ್ರಗಳ ನಕಲಿ ಪ್ರತಿಗಳು ವಶಕ್ಕೆ ಪಡೆಯಲಾಗಿದೆ.




