March 26, 2026

ಬೆಳ್ತಂಗಡಿ: ಕಚೇರಿಯಲ್ಲೇ ಹೃದಯಾಘಾತ, ಮೇಲಂತಬೆಟ್ಟು ಗ್ರಾಮ ಪಂಚಾಯತ್‌ನ ಗ್ರಾಮ ಸಹಾಯಕ ಮೃತ್ಯು

0
image_editor_output_image904780201-1654602223840.jpg

ಬೆಳ್ತಂಗಡಿ: ತಾಲೂಕಿನ ಮೇಲಂತಬೆಟ್ಟು ಗ್ರಾಮ ಪಂಚಾಯತ್‌ನ ಗ್ರಾಮ ಸಹಾಯಕರೊಬ್ಬರು ಕರ್ತವ್ಯದಲ್ಲಿದ್ದಾಗ ಕಚೇರಿಯಲ್ಲೇ ಹೃದಯಾಘಾತಗೊಂಡು ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ.

ಮೇಲಂತಬೆಟ್ಟು ಗ್ರಾಮದ ಗ್ರಾಮ ಸಹಾಯನಾಗಿದ್ದ ಉರುವಾಲು ಗ್ರಾಮದ ಬೇಂಗಾಯಿ ನಿವಾಸಿ ಸುಂದರ್ ಗೌಡ (45) ಮೃತಪಟ್ಟ ವ್ಯಕ್ತಿ.

ಮಂಗಳವಾರ ಮೇಲಂತಬೆಟ್ಟು ಗ್ರಾಮಲೆಕ್ಕಿಗ ಕಚೇರಿಯಲ್ಲಿ ಗ್ರಾಮ ಸಹಾಯಕರಾಗಿ, ಸುಂದರಗೌಡ ಕರ್ತವ್ಯದಲ್ಲಿದ್ದರು. ಮಧ್ಯಾಹ್ನ ವೇಳೆ ಮತ್ತೋರ್ವ ಗ್ರಾಮಲೆಕ್ಕಿಗ ಶಿವಕುಮಾರ್‌ ಅವರು ಹಾಗೂ ಮುಂಡೂರು ಗ್ರಾ.ಪಂ. ಸದಸ್ಯ ಸಂತೋಷ್ ಮುಂಡೂರು ಅವರೊಂದಿಗೆ ಚಹಾ‌ ಸೇವಿಸಿ‌ ಕಚೇರಿಗೆ ತೆರಳಿದ್ದರು. ಈ ವೇಳೆಗೆ ಎದೆನೋವು‌ ಕಾಣಿಸಿಕೊಂಡಿದೆ. ಕೂಡಲೇ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕರೆತಂದಿದ್ದಾರೆ. ಈ ವೇಳೆ ಅವರು ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!