February 3, 2026

ಕುಂದಾಪುರ: ಟಿಪ್ಪರ್ ವಾಹನಕ್ಕೆ ಸ್ಕೂಟರ್ ಢಿಕ್ಕಿ, ಸ್ಕೂಟರ್ ಸವಾರ ಮೃತ್ಯು, ಹಿಂಬದಿ ಸವಾರನಿಗೆ ಗಾಯ

0
Screenshot_2022-06-06-12-04-09-55_680d03679600f7af0b4c700c6b270fe7.jpg

ಕುಂದಾಪುರ: ಕೆಟ್ಟು ನಿಂತಿದ್ದ ಟಿಪ್ಪರ್ ವಾಹನಕ್ಕೆ ಸ್ಕೂಟರ್ ಢಿಕ್ಕಿಯಾಗಿ, ಸ್ಕೂಟರ್ ಸವಾರ ಗಂಭೀರ ಗಾಯಗೊಂಡು, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದು, ಹಿಂಬದಿ ಸವಾರ ಗಾಯಗೊಂಡ ಘಟನೆ ರವಿವಾರ ತಡರಾತ್ರಿ ರಾಷ್ಟ್ರೀಯ ಹೆದ್ದಾರಿ 66ರ ತಲ್ಲೂರು ಸಮೀಪ ನಡೆದಿದೆ‌.

ಕಂಬದಕೋಣೆ ಗ್ರಾಮದ ಹಳಗೇರಿ ತೆಂಕಬೆಟ್ಟಿನ ನಿವಾಸಿ ಸತೀಶ್ ಜೋಗಿ (42 ವ) ಮೃತಪಟ್ಟವರು. ಆಕಾಶ್ ಜೋಗಿ (17 ವ) ಗಂಭೀರ ಗಾಯಗೊಂಡಿದ್ದು, ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕುಂದಾಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!