ಇಸ್ಲಾಂ ಮತ್ತು ಪ್ರವಾದಿಗೆ ನಾಪೂರ್ ಶರ್ಮಾ ಅವಮಾನ ಹಿನ್ನೆಲೆ ಭಾರತೀಯ ರಾಯಭಾರಿಗೆ ಸಮನ್ಸ್ ನೀಡಿದ ಕತಾರ್: ಸಮನ್ಸ್ ನಲ್ಲಿ ಏನಿದೆ?
ದೋಹಾ(ಕತಾರ್): ಬಿಜೆಪಿ ವಕ್ತಾರ ನೂಪುರ್ ಶರ್ಮಾ ಅವರ ಇಸ್ಲಾಂ ಮತ್ತು ಪ್ರವಾದಿ ಮೊಹಮ್ಮದ್ ಅವರ ವಿವಾದಾತ್ಮಕ ಹೇಳಿಕೆಗಳ ಕುರಿತು ಕತಾರ್ ಭಾನುವಾರ ಭಾರತೀಯ ರಾಯಭಾರಿಗೆ ಸಮನ್ಸ್ ನೀಡಿದೆ.
ಈ ಮೊದಲುನೂಪುರ್ ಶರ್ಮಾ ಅವರು ಟ್ವಿಟರ್ ಪೋಸ್ಟ್ ಮೂಲಕ ಕ್ಷಮೆಯಾಚಿಸಿದ ನಂತರ ಅವರ ಟೀಕೆಗಳಿಗಾಗಿ ಇಂದು ಪಕ್ಷದಿಂದ ಅಮಾನತುಗೊಳಿಸಲಾಯಿತು.
ಕತಾರ್ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಭಾನುವಾರ ಭಾರತೀಯ ರಾಯಭಾರಿ ದೀಪಕ್ ಮಿತ್ತಲ್ ಅವರನ್ನು ಕರೆಸಿ ಅಧಿಕೃತ ಟಿಪ್ಪಣಿ ಹಸ್ತಾಂತರಿಸಿದ್ದು, ಇದೀಗ ಅಮಾನತುಗೊಂಡಿರುವ ಮತ್ತು ಉಚ್ಛಾಟಿತ ಬಿಜೆಪಿ ನಾಯಕರು ಪ್ರವಾದಿ ಮೊಹಮ್ಮದ್ ವಿರುದ್ಧ ಮಾಡಿದ ವಿವಾದಾತ್ಮಕ ಹೇಳಿಕೆಗಳಿಗೆ ನಿರಾಶೆ ಮೂಡಿಸಿದೆ ಮತ್ತು ಇದು ಖಂಡನೀಯ ಎಂದು ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯೆಯಾಗಿ ಮಿತ್ತಲ್, ನಾಪೂರು ಶರ್ಮಾ ಟ್ವೀಟ್‌ಗಳು ಭಾರತ ಸರ್ಕಾರದ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ ಎಂದು ಹೇಳಿದ್ದಾರೆ.
ವಿಶ್ವದಾದ್ಯಂತ ಎರಡು ಶತಕೋಟಿಗೂ ಹೆಚ್ಚು ಮುಸ್ಲಿಮರು ಪ್ರವಾದಿ ಮೊಹಮ್ಮದ್ ಅವರ ಮಾರ್ಗದರ್ಶನವನ್ನು ಅನುಸರಿಸುತ್ತಾರೆ ಎಂದು ಟಿಪ್ಪಣಿ ಸೂಚಿಸಿದೆ, ಅವರ ಸಂದೇಶವು ಶಾಂತಿ, ತಿಳುವಳಿಕೆ ಮತ್ತು ಸಹಿಷ್ಣುತೆಯ ಸಂದೇಶ ಮತ್ತು ಬೆಳಕಿನ ದಾರಿಯಾಗಿದೆ ಎಂದು ಕತಾರ್ ಒತ್ತಿ ಹೇಳಿದೆ.





