March 26, 2026

ಸೂರಿಕುಮೇರು ಸರಣಿ ಕಳ್ಳತನ:
ಎರಡು ಮನೆ ಒಂದು ಅಂಗಡಿಯ ಬೀಗ ಮುರಿದು ಕಳ್ಳತನ

0
image_editor_output_image1690449429-1654414463076

ಮಾಣಿ : ಇಲ್ಲಿನ ಸೂರಿಕುಮೇರು ಎಂಬಲ್ಲಿ ಹೈವೇ ಚಿಕನ್ ಸ್ಟಾಲ್ ಬಳಿಯ ಎರಡು ಮನೆ ಮತ್ತು ಒಂದು ಅಂಗಡಿಗೆ ಶನಿವಾರ ರಾತ್ರಿ ವೇಳೆ ಬೀಗ ಮುರಿದು ಒಳ ನುಗ್ಗಿದ ಕಳ್ಳರು ಕಪಾಟು ಗಳನ್ನೆಲ್ಲಾ ಜಾಲಾಡಿ ಒಂದು ಮನೆಯಿಂದ ಬಾಡಿಗೆ ನೀಡಲು ತೆಗೆದಿಟ್ಟಿದ್ದ ಒಂದು ಸಾವಿರ ಹಣ,ಕಾಣಿಕೆ ಡಬ್ಬಿಯಲ್ಲಿದ್ದ ಹಣ ಮತ್ತು ಚಿನ್ನವೆಂದು ಭಾವಿಸಿ ಕೆಲವು ಗೋಲ್ಡ್ ಆಭರಣಗಳನ್ನು,ಬೆಳ್ಳಿಯ ಕಾಲು ಚೈನ್ ಹಾಗೂ ಇನ್ನೊಂದು ಮನೆಯ ಕಪಾಟು ಜಾಲಾಡಿ ಕಾಣಿಕೆ ಡಬ್ಬಿಯಲ್ಲಿದ್ದ ನಗದು ಕಳ್ಳತನ ಮಾಡಿದ್ದಾರೆ,ಅಂಗಡಿಯಲ್ಲಿ ಏನೂ ಸಿಗದೆ ಅಲ್ಲಿದ್ದ ಕೆಲವು ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿ ಹೋಗಿದ್ದಾರೆ,ಕಳ್ಳತನ ನಡೆದ ಮನೆಯು ಬಾಡಿಗೆಯದ್ದಾಗಿದ್ದು ಬಡ ಕುಟುಂಬಗಳು ಅದರಲ್ಲಿ ನೆಲೆಸಿತ್ತು, ಅನಾರೋಗ್ಯ ನಿಮಿತ್ತ ಆಸ್ಪತ್ರೆಯಲ್ಲಿ ದಾಖಲಾಗಿರುವುದರಿಂದ ಒಂದು ಕುಟುಂಬ ಬೀಗಹಾಕಿ ಹೋಗಿದ್ದರು, ಇನ್ನೊಂದು ಮನೆಯವರು ಸಂಬಂಧಿಕರ ಮನೆಗೆ ಹೋಗಿದ್ದ ಸಮಯದಲ್ಲೇ ಕಳ್ಳತನ ನಡೆದಿದೆ,ಚಿಕನ್ ಸ್ಟಾಲ್ ನವರು ಬೆಳಿಗ್ಗೆ ಅಂಗಡಿ ತೆರೆಯಲು ಬಂದಾಗ ತುಂಡು ಮಾಡಿದ ಬೀಗ ಗಳು ಎಸೆದ ರೀತಿಯಲ್ಲಿ ಕಾಣ ಸಿಕ್ಕಿದ್ದು ಘಟನೆ ನಡೆದ ಬಗ್ಗೆ ಅರಿವಾಗಿದೆ ,ರಾತ್ರಿ ವೇಳೆ ಕಳ್ಳತನ ನಡೆಸುವ ಜಾಲವೊಂದು ವಿವಧ ಕಡೆ ಸಕ್ರಿಯವಾಗಿದ್ದು ಯಾರೂ ಮನೆ ಬಿಟ್ಟು ಎಲ್ಲೂ ಹೋಗದ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಬಂಟ್ವಾಳ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಈ ಬಗ್ಗೆ ದೂರು ನೀಡದ ಕಾರಣ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!