February 1, 2026

ಬೆಳ್ತಂಗಡಿ: ಮೃತ್ಯುಂಜಯ ನದಿಯಲ್ಲಿ ಅಕ್ರಮ ಮರಳುಗಾರಿಕೆ:
ಬಂಟ್ವಾಳ ಎಎಸ್ ಪಿ ತಂಡದಿಂದ ದಾಳಿ

0
IMG-20211103-WA0007.jpg

ಬೆಳ್ತಂಗಡಿ: ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಮುಂಡಾಜೆ ಗ್ರಾಮದ ಹೊಸಕಾಪು ಎಂಬಲ್ಲಿ ಖಾಸಗಿ ಜಾಗದಲ್ಲಿ ಹಾದುಹೋಗುವ ಮೃತ್ಯುಂಜಯ ನದಿಯಲ್ಲಿ ಅಕ್ರಮವಾಗಿ ಅನೇಕ ಸಮಯಗಳಿಂದ ರಾಜಾರೋಷವಾಗಿ ಮರಳುಗಾರಿಗೆ ನಡೆಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದು ಬಂಟ್ವಾಳ ಎಎಸ್ ಪಿ ಮತ್ತು ತಂಡ ಬುಧವಾರ ಬೆಳಗ್ಗಿನ ಜಾವ ಮಫ್ತಿಯಲ್ಲಿ ದಾಳಿ ನಡೆಸಿದ್ದಾರೆ.

ದಾಳಿ ವೇಳೆ ಮರಳುಗಾರಿಕೆಗೆ ಬಳಸುತ್ತಿದ್ದ ಎರಡು ದೋಣಿ ಹಾಗೂ ಎರಡು ಟಿಪ್ಪರ್ ವಾಹನವನ್ನು ವಶಪಡಿಸಿಕೊಂಡು ಧರ್ಮಸ್ಥಳ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಧರ್ಮಸ್ಥಳ ನೇತ್ರಾವತಿ ನದಿಯಲ್ಲಿ ಅಕ್ರಮ ಮರಳುಗಾರಿಕೆ ಮೇಲೆ ದಾಳಿಯಲ್ಲಿ ಒಂದು ದೋಣಿಯನ್ನು ವಶಪಡಿಸಿಕೊಳ್ಳಲಾಗಿದೆ. ಎರಡು ಕಡೆ ದಾಳಿ ವೇಳೆ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದು, ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಎರಡು ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!