ಮಂಗಳೂರು: ಅಲ್ಪ ಸಂಖ್ಯಾತರಿಗೆ ಇಲ್ಲಿದೆ ಸುವರ್ಣಾವಕಾಶ: ಇಂದೆ ಅರ್ಜಿ ಸಲ್ಲಿಸಿ !
ಮಂಗಳೂರು: ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮಿತದಿಂದ 2022-2023ನೇ ಸಾಲಿನ ಸಾಲ/ಸಹಾಯಧನ ಯೋಜನೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಆಟೋ ರಿಕ್ಷಾ/ ಟ್ಯಾಕ್ಸಿ/ ಸರಕು ವಾಹನಗಳ ಖರೀದಿಗಾಗಿ ಸಹಾಯಧನ, ಸ್ವಯಂ ಉದ್ಯೋಗ ಯೋಜನೆ, ಶ್ರಮ ಶಕ್ತಿ ಯೋಜನೆಗೆ ಸಾಲ ನೀಡಲಾಗುವುದು ಎಂದು ಇಲಾಖೆ ಹೇಳಿದೆ.
ಅರ್ಜಿಯನ್ನು http://kmdconline.karnataka.gov.in ಸಲ್ಲಿಸಬಹುದು. ಜೂನ್ 15 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.
ಹೆಚ್ಚಿನ ಮಾಹಿತಿಗಾಗಿ 24X7 ಸಹಾಯವಾಣಿ ಮೊಬೈಲ್ ಸಂಖ್ಯೆ: 8277799990 ಗೆ ಕರೆ ಮಾಡಬಹುದಾಗಿದೆ.




