ಪ್ರತಿ ಮಸೀದಿಯಲ್ಲಿ ಶಿವಲಿಂಗವನ್ನು ಹುಡುಕುವ ಅಗತ್ಯವಿಲ್ಲ: ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್
ದೆಹಲಿ: ಪ್ರತಿ ಮಸೀದಿಯಲ್ಲಿ ಶಿವಲಿಂಗವನ್ನು ಹುಡುಕುವ ಮತ್ತು ಪ್ರತಿದಿನ ಹೊಸ ವಿವಾದವನ್ನು ಪ್ರಾರಂಭಿಸುವ ಅಗತ್ಯವಿಲ್ಲ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಗುರುವಾರ ಹೇಳಿದ್ದಾರೆ.
ಜ್ಞಾನವಾಪಿ ಮಸೀದಿ ವಿವಾದವನ್ನು ಮತ್ತೊಂದು ಅಯೋಧ್ಯೆ ವಿವಾದವಾಗಿಸಬೇಕು ಎನ್ನುವ ಪ್ರಯತ್ನಗಳಿಗೆ ಭಾಗವತ್ ಅವರ ಈ ಹೇಳಿಕೆ ತಣ್ಣೀರು ಎರಚಿದೆ. ಬೀದಿಬೀದಿಗಳಲ್ಲಿ ಪ್ರತಿಭಟನೆಗಳನ್ನು ನಡೆಸುವ ಮೂಲಕ ಇದನ್ನೊಂದು ದೇಶವ್ಯಾಪಿ ಜನಾಂದೋಲನವಾಗಿಸಬೇಕು ಎಂದು ಹಿಂದುತ್ವ ಪರ ಹೋರಾಟಗಾರರು ಯತ್ನಿಸುತ್ತಿದ್ದರು. ಇಂಥ ಪ್ರಯತ್ನಗಳನ್ನು ಆರ್‌ಎಸ್‌ಎಸ್ ಸಮರ್ಥಿಸುವುದಿಲ್ಲ ಎಂದು ಮೋಹನ್ ಭಾಗವತ್ ಇದೀಗ ಸ್ಪಷ್ಟಪಡಿಸಿದ್ದಾರೆ.
ಇಸ್ಲಾಂ ಧರ್ಮ ಬಂದಾಗ, ಭಾರತೀಯರ ನೈತಿಕ ಸ್ಥೈರ್ಯವನ್ನು ಮುರಿಯಲು, ಸಾವಿರಾರು ದೇವಾಲಯಗಳು ನಾಶವಾದವು”. ನಮಾಜ್ ಕೂಡ ಒಂದು ಪೂಜೆ. ಅವರು ನಮ್ಮ ಪೂರ್ವಜರಿಂದ ಬಂದವರು. ನಾವು ಯಾವುದೇ ರೀತಿಯ ‘ಪೂಜೆ’ಯ ವಿರುದ್ಧವಾಗಿಲ್ಲ ಎಂದು ಭಾಗವತ್ ಸ್ಪಷ್ಟಪಡಿಸಿದ್ದಾರೆ.