December 3, 2024

ಪಠ್ಯ ಪುಸ್ತಕದಿಂದ ನನ್ನ ಕತೆಯನ್ನು ಕಿತ್ತು ಹಾಕಿ: ಬೊಳುವಾರು ಮಹಮದ್ ಕುಂಞಿ

0

ಬೆಂಗಳೂರು: ಬಿಜೆಪಿ ಸರ್ಕಾರದ ಪಠ್ಯ ಪರಿಷ್ಕರಣೆ ವಿರೋಧಿಸಿ 5ನೆಯ ತರಗತಿ ಪುಸ್ತಕದ 24ನೆಯ ಪುಟದಲ್ಲಿರುವ, ‘ಸುಳ್ಳು ಹೇಳಬಾರದು’ ಎಂಬ ಕತೆಯನ್ನು ಕೈಬಿಡುವಂತೆ ಶಿಕ್ಷಣ ಸಚಿವ ಬಿ.ಸಿ ನಾಗೇಶ್‌ಗೆ ಬೊಳುವಾರು ಮಹಮದ್ ಕುಂಞಿ ಪತ್ರ ಬರೆದಿದ್ದಾರೆ.

ಪಠ್ಯ ಬದಲಾವಣೆ ವಿವಾದಕ್ಕೆ ಸಂಬಂಧಿಸಿದಂತೆ ಸಾಹಿತ್ಯ ವಲಯದಲ್ಲಿ ಅನಿರೀಕ್ಷಿತ ಬೆಳವಣಿಗೆ ನಡೆದಿವೆ. ಅಸಮಾಧಾನಗೊಂಡ ಅನೇಕ ಸಾಹಿತಿಗಳು ವಿವಿಧ ಅಕಾಡೆಮಿಗಳಿಗೆ ರಾಜೀನಾಮೆ ನೀಡತೊಡಗಿದ್ದು, ಕೆಲವರು ಪಠ್ಯದಲ್ಲಿ ತಮ್ಮ ಕವನ, ಕತೆ, ಪಾಠ ಕೈಬಿಡಬೇಕೆಂದು ಪತ್ರ ಬರೆಯತೊಡಗಿದ್ದಾರೆ.

ಶಿಕ್ಷಣ ಸಚಿವರಿಗೆ ಪತ್ರ ಬರೆದಿರುವ ಸಾಹಿತಿ ಬೊಳುವಾರು ಮಹಮದ್ ಕುಂಞಿ ಅವರು, ಪ್ರಸಕ್ತ ಸಿರಿ ಕನ್ನಡ-ಪ್ರಥಮ ಭಾಷಾ ಕನ್ನಡ ಪಠ್ಯಪುಸ್ತಕ(ಪರಿಷ್ಕೃತ) 5 ನೇ ತರಗತಿ ಪುಸ್ತಕದ 24 ನೇ ಪುಟದಲ್ಲಿರುವ ‘ಸುಳ್ಳು ಹೇಳಬಾರದು’ ಎಂಬ ಹೆಸರಿನ ಕತೆ ಕೈಬಿಡುವಂತೆ ಹೇಳಿದ್ದಾರೆ.

ಪಠ್ಯದಲ್ಲಿರುವ ನನ್ನ ಪುಟ್ಟ ಕತೆಯೊಂದರ ಆಶಯಗಳು, ಪ್ರಸಕ್ತ ವರ್ಷದಲ್ಲಿ ಪರಿಷ್ಕೃತಗೊಂಡಿರುವ/ಗೊಳ್ಳಲಿರುವ ಇತರ ಕೆಲವು ಪಠ್ಯಗಳ ಆಶಯಗಳೊಂದಿಗೆ ಸರಿಯಾಗಿ ಹೊಂದಿಕೆಯಾಗದಿರುವ ಸಾಧ್ಯತೆಗಳಿರುವುದರಿಂದ, ನಮ್ಮ ಪುಟ್ಟ ಮಕ್ಕಳು ಗೊಂದಲಕ್ಕೊಳಗಾಗುವ ಸಾಧ್ಯತೆಗಳುಂಟು. ಆದ್ದರಿಂದ, ದಯವಿಟ್ಟು ‘ಸುಳ್ಳು ಹೇಳಬಾರದು’ ಎಂಬ ಈ ನನ್ನ ಕತೆಯನ್ನು ಕಿತ್ತು ಹಾಕಿ, ಪರಿಷ್ಕೃತ ಪಠ್ಯ ಕ್ರಮದ ಆಶಯಗಳಿಗೆ ಹೊಂದಿಕೊಳ್ಳುವ ಬೇರೊಂದು ಪಠ್ಯವನ್ನು ಸೇರಿಸಿಕೊಳ್ಳಬೇಕೆಂದು ಹೇಳಿದ್ದಾರೆ.

9 ನೇ ತರಗತಿಗೆ ಪಠ್ಯವಾಗಿದ್ದ ತಮ್ಮ‌ ಪದ್ಯವನ್ನು ಕೈಬಿಡಬೇಕೆಂದು ಹಿರಿಯ ಕವಯತ್ರಿ, ಲೇಖಕಿ ರೂಪ ಹಾಸನ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ‌. 5 ನೇ ತರಗತಿಗೆ ಪಠ್ಯವಾಗಿರುವ ತಮ್ಮ ಕವಿತೆಯನ್ನು ಪ್ರಕಟಿಸಲು ನೀಡಿದ್ದ ಅನುಮತಿಯನ್ನು ಹಿರಿಯ ಚಿಂತಕ ಮೂಡ್ನಾಕೂಡು ಚಿನ್ನಸ್ವಾಮಿ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

Leave a Reply

Your email address will not be published. Required fields are marked *

error: Content is protected !!