ಯುವತಿ ಮೇಲೆ ಐವರಿಂದ ಸಾಮೂಹಿಕ ಅತ್ಯಾಚಾರ: ಕೃತ್ಯವನ್ನು ವೀಡಿಯೋ ಮಾಡಿರುವ ಮಹಿಳೆ
ಹೈದರಾಬಾದ್: ತನ್ನ ಸಂಗಾತಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂಬ ಶಂಕೆ ಮೇರೆಗೆ ಮಹಿಳೆಯೊಬ್ಬರು ಯುವತಿ ಮೇಲೆ ಐವರಿಂದ ಅತ್ಯಾಚಾರ ಮಾಡಿಸಿ ಕೃತ್ಯವನ್ನು ವಿಡಿಯೋ ಮಾಡಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.
ತೆಲಂಗಾಣ ರಾಜಧಾನಿ ಹೈದರಾಬಾದ್ ನ ಗಚ್ಚಿಬೌಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಗಾಯತ್ರಿ ಮತ್ತು ಇತರೆ ಐದು ಅತ್ಯಾಚಾರ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಗಾಯತ್ರಿ, ಉಲ್ಸಲಾ ಮನೋಜ್ ಕುಮಾರ್ (22), ಸೈಯದ್ ಮಸ್ತಾನ್ (25), ಶೇಖ್ ಮುಜಾಹಿದ್(25), ಶೇಖ್ ಮೌಲಾ ಅಲಿ(32), ಮತ್ತು ಪೃದ್ವಿ ವಿಷ್ಣು ವರ್ಧನ್(22) ಎಂದು ಗುರುತಿಸಲಾಗಿದೆ.
ಪೊಲೀಸ್ ಮೂಲಗಳ ಆರೋಪಿ ಮಹಿಳೆ ಗಾಯತ್ರಿ ಹಾಗೂ ಆಕೆಯ ಪತಿ ಶ್ರೀಕಾಂತ್ ಕೊಂಡಾಪುರ ಶ್ರೀರಾಮನಗರದಲ್ಲಿ ವಾಸವಾಗಿದ್ದರು.
ವೃತ್ತಿಯಲ್ಲಿ ಶ್ರೀಕಾಂತ್ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದರೆ, ಗಾಯತ್ರಿ ಸಿವಿಲ್ಸ್ ಗೆ ತಯಾರಿ ನಡೆಸುತ್ತಿದ್ದರು. ಈ ನಡುವೆ ಗಾಯತ್ರಿಗೆ ಸಾಮಾಜಿಕ ಮಾಧ್ಯಮದಲ್ಲಿ ಆಂಧ್ರ ಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಶ್ರೀಹರ್ಷಿತಾ (25) ಎಂಬಾಕೆ ಪರಿಚಯವಾಗಿದ್ದಳು.
ಇಬ್ಬರೂ ಸಿವಿಲ್ಸ್ ಗೆ ತಯಾರಿ ನಡೆಸುತ್ತಿದ್ದರಿಂದ ಆಗಾಗ್ಗೆ ಇಬ್ಬರೂ ಪರಸ್ಪರ ಚಾಟ್ ಮತ್ತು ಫೋನ್ ಮಾಡಿ ಮಾತನಾಡುತ್ತಿದ್ದರು.