December 16, 2025

ರ್‍ಯಾಲಿಯಲ್ಲಿ ಅವಹೇಳನಕಾರಿ ಘೋಷಣೆ ಕೂಗಿದ ಆರೋಪ: ಪಿಎಫ್‌ಐ ಮುಖಂಡ ಯಹ್ಯಾ ತಂಙಳ್ ಬಂಧನ

0
image_editor_output_image-171508313-1653889033593.jpg

ಆಲಪ್ಪುಝ: ಕೇರಳದ ಆಲಪ್ಪುಳದಲ್ಲಿ ಆಯೋಜಿಸಲಾಗಿದ್ದ ರ್‍ಯಾಲಿಯಲ್ಲಿ ಅಪ್ರಾಪ್ತ ಬಾಲಕನೊಬ್ಬ ಅವಹೇಳನಕಾರಿ ಘೋಷಣೆಗಳನ್ನು ಕೂಗಿದ ಆರೋಪದ ಮೇಲೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ(ಪಿಎಫ್‌ಐ) ಮುಖಂಡನನ್ನು ಬಂಧಿಸಲಾಗಿದೆ.

ಪಿಎಫ್‌ಐ ಸಂಘಟನೆಯ ಬಂಧಿತ ಮುಖಂಡ ಯಾಹ್ಯಾ ತಂಙಳ್ ಕಾರ್ಯಕ್ರಮದ ಸಂಘಟಕರಲ್ಲಿ ಒಬ್ಬರಾಗಿದ್ದಾರೆ.

‘ಗಣರಾಜ್ಯವನ್ನು ಉಳಿಸಿ’ ಎಂಬ ರ್‍ಯಾಲಿಯಲ್ಲಿ ಅಪ್ರಾಪ್ತ ಬಾಲಕನೊಬ್ಬ ತಂದೆಯ ಹೆಗಲ ಮೇಲೆ ಕುಳಿತು ಅವಹೇಳನಕಾರಿ ಘೋಷಣೆಗಳನ್ನು ಕೂಗಿರುವ ವಿಡಿಯೊ ವೈರಲ್‌ ಆಗಿದೆ. ಇದಕ್ಕೆ ಸಂಬಂಧಿಸಿದಂತೆ ಬಾಲಕನ ತಂದೆಯನ್ನು ಈಗಾಗಲೇ ವಶಕ್ಕೆ ಪಡೆಯಲಾಗಿದೆ. ಕಾರ್ಯಕ್ರಮದಲ್ಲಿ ಸಂಘಟಕರಲ್ಲಿ ಒಬ್ಬರಾದ ಯಾಹ್ಯಾ ತಂಙಳ್‌ ಅವರನ್ನು ಬಂಧಿಸಿದ್ದೇವೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಾಲಕನ ವಿವಾದಾತ್ಮಕ ಘೋಷಣೆಗೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರು ದೂರು ನೀಡಿದ್ದರು. ಆ ಹಿನ್ನೆಲೆಯಲ್ಲಿ ತಂಙಳ್‌ರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!