ಸುಬ್ರಹ್ಮಣ್ಯ: ಮಧ್ಯೆ ರಾತ್ರಿ ಜ್ಯೂಸ್ ಅಂಗಡಿಗೆ ನುಗ್ಗಿ ಕಬ್ಬು ತಿಂದ ಒಂಟಿ ಸಲಗ
ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಮಣಿಭಾಂಡ ಸಮೀಪ ಕಾಡಾನೆಯೊಂದು ರಸ್ತೆ ಬದಿಯ ಜ್ಯೂಸ್ ಅಂಗಡಿಗೆ ಬಂದು ಜ್ಯೂಸ್ ಮಾಡಲು ಇಟ್ಟಿದ್ದ ಕಬ್ಬು ತಿಂದು ಹೋಗಿದೆ. ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕರ್ತವ್ಯ ನಿರ್ವಹಿಸಿ ಕೊಂಬಾರು ನಿವಾಸಿಯೋರ್ವರು ತನ್ನ ಮನೆಗೆ ಹಿಂತಿರುಗುತ್ತಿದ್ದಾಗ ಕಾಡಾನೆ ಕಬ್ಬು ತಿನ್ನುತ್ತಿರುವುದನ್ನು ನೋಡಿದ್ದಾರೆ. ಕೂಡಲೇ ತಮ್ಮ ಮೊಬೈಲ್ ಕ್ಯಾಮರಾ ಮೂಲಕ ಈ ದೃಶ್ಯ ಸೆರೆ ಹಿಡಿದಿದ್ದಾರೆ.
ಸುಬ್ರಹ್ಮಣ್ಯ, ಸುಳ್ಯ ಹಾಗೂ ಇನ್ನಿತರ ಭಾಗಗಳಲ್ಲಿ ಕಾಡಾನೆಗಳು ತೋಟಕ್ಕೆ ನುಗ್ಗಿ ಬೆಳೆ ನಾಶ ಮಾಡಿದ ಅಹಲವಾರು ಘಟನೆಗಳಿವೆ ಆದರೆ ಇದೀಗ ಕಾಡಾನೆಯೊಂದು ಜ್ಯೂಸ್ ಅಂಗಡಿಗೆ ಬಂದು ಜ್ಯೂಸ್ ಮಾಡಲು ಇಟ್ಟಿದ್ದ ಕಬ್ಬುಗಳನ್ನು ತಿಂದ ಘಟನೆ ನಡೆದಿದೆ.






