July 6, 2026

ಇಬ್ಬರು ಮಕ್ಕಳು ಸೇರಿ ಐವರ ಮೃತದೇಹ ಬಾವಿಯಲ್ಲಿ ಪತ್ತೆ

0
Screenshot_2022-05-28-17-11-49-57_680d03679600f7af0b4c700c6b270fe7.jpg

ಜೈಪುರ: ಮೂವರು ಮಹಿಳೆಯರು ಮತ್ತು ಇಬ್ಬರು ಮಕ್ಕಳು ಸೇರಿ ಐವರ ಶವ ಬಾವಿಯಲ್ಲಿ ಪತ್ತೆಯಾದ ಘಟನೆರಾಜಸ್ಥಾನದ ಜೈಪುರ ಜಿಲ್ಲೆಯ ದುಡು ಪಟ್ಟಣದಲ್ಲಿ ನಡೆದಿದೆ. ಸ್ಥಳೀಯರು ಇದೊಂದು ಹತ್ಯೆ ಎಂದು ಶಂಕಿಸಿದ್ದಾರೆ.

ಸಹೋದರಿಯರಾದ ಕಲುದೇವಿ, ಮಮತಾ, ಕಮಲೇಶ, ನಾಲ್ಕು ವರ್ಷದ ಮಗು ಮತ್ತು 27 ದಿನ ಪ್ರಾಯದ ಮಗು ಹತ್ಯೆಯಾದವರು. ಹತ್ಯೆಯಾದ ಮಹಿಳೆಯರ ಪೈಕಿ ಮಮತಾದೇವಿ, ಕಮಲೇಶ ತುಂಬು ಗರ್ಭಿಣಿಯರು. ಮಕ್ಕಳಿಬ್ಬರೂ ಕಲುದೇವಿ ಅವರದ್ದು ಎನ್ನಲಾಗಿದೆ.

ಹತ್ಯೆಯಾದ ಮಹಿಳೆಯರ ಪೈಕಿ ಮಮತಾ ದೇವಿ ಮತ್ತು ಕಮಲೇಶ ಇಬ್ಬರೂ ತುಂಬು ಗರ್ಭಿಣಿಯಾಗಿದ್ದಾರೆ. ಮನೆಯಿಂದ ಸುಮಾರು ಎರಡು ಕಿಮೀ ದೂರದಲ್ಲಿರುವ ಬಾವಿಯಲ್ಲಿ ಶವಗಳು ಪತ್ತೆಯಾಗಿದೆ.

ವರದಕ್ಷಿಣೆ ಕಾರಣಕ್ಕಾಗಿ ಅತ್ತೆಯಂದಿರು ಅವರನ್ನು ಕೊಂದಿದ್ದಾರೆ ಎಂಬ ಶಂಕೆ ಇದೀಗ ವ್ಯಕ್ತವಾಗಿದೆ. ಐವರೂ ಕೂಡಾ ಬುಧವಾರ ನಾಪತ್ತೆಯಾಗಿದ್ದು, ನಾಲ್ಕು ದಿನಗಳ ಕಾಲ ಹುಡುಕಾಟ ನಡೆಸಲಾಗಿತ್ತು.

Leave a Reply

Your email address will not be published. Required fields are marked *

You may have missed

error: Content is protected !!