March 26, 2026

ಎಲ್ಲ ಹೊತ್ತಿನಲ್ಲೂ ಮ್ಯಾಗಿ ಮಾಡುತ್ತಿದ್ದ ಪತ್ನಿ: ಬೇಸತ್ತ ಪತಿಯಿಂದ ಪತ್ನಿಗೆ ವಿಚ್ಛೇದನ

0
Screenshot_2022-05-28-11-35-57-89_680d03679600f7af0b4c700c6b270fe7.jpg

ಮೈಸೂರು: ಪತಿಯೊಬ್ಬ ತನ್ನ ಪತ್ನಿ ಬೆಳಗಿನ ತಿಂಡಿ, ಮಧ್ಯಾಹ್ನದ ಊಟ, ರಾತ್ರಿ ಊಟ ಎಲ್ಲೆಲ್ಲೂ ಮ್ಯಾಗಿ ಮಾಡಿ ಹಾಕುತ್ತಿದ್ದಾಳೆಂದು ಬೇಸತ್ತ ಪತಿಯೊಬ್ಬ ಪತ್ನಿಗೆ ವಿಚ್ಛೇದನ ನೀಡಿದ್ದಾನೆ.

ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಎಂ.ಎಲ್.ರಘುನಾಥ್, ಸಣ್ಣಪುಟ್ಟ ವಿಚಾರಗಳಿಗೆ ದಂಪತಿಗಳು ವಿವಾಹ ವಿಚ್ಛೇದನ ಪಡೆಯುವ ವೈವಾಹಿಕ ಪ್ರಕರಣಗಳ ಕುರಿತು ಮಾತನಾಡಿದ್ದಾರೆ. 

ಬಳ್ಳಾರಿಯಲ್ಲಿ ಜಿಲ್ಲಾ ನ್ಯಾಯಾಧೀಶರಾಗಿದ್ದಾಗ ಈ ಪ್ರಕರಣ ಕಂಡು ಬಂದಿತ್ತು. ಮ್ಯಾಗಿ ನೂಡಲ್ಸ್ ಹೊರತುಪಡಿಸಿ ಬೇರೆ ಯಾವುದೇ ಅಡುಗೆ ಮಾಡಲು ನನ್ನ ಹೆಂಡತಿಗೆ ಗೊತ್ತಿಲ್ಲ, ಉಪಹಾರ, ಮಧ್ಯಾಹ್ನ ಊಟ ಹಾಗೂ ರಾತ್ರಿ ಊಟಕ್ಕೆಲ್ಲಾ ಮ್ಯಾಗಿ ನೂಡೆನ್ಸ್ ಮಾಡುತ್ತಿದ್ದಳು.

ಪ್ರಾವಿಷನ್ ಸ್ಟೋರ್’ಗೆ ಹೋದರೆ ಆಕೆ ಕೇವಲ ಇನ್‌ಸ್ಟಂಟ್ ನೂಡಲ್ಸ್ ಮಾತ್ರ ತರುತ್ತಿದ್ದಳು ಎಂದು ವ್ಯಕ್ತಿ ಹೇಳಿಕೊಂಡಿದ್ದ. ಈ ಕೇಸ್’ಗೆ ಮ್ಯಾಗಿ ಕೇಸ್ ಎಂದು ಹೆಸರಿಡಲಾಗಿತ್ತು. ವಾದ ಪ್ರತಿವಾದದ ಬಳಿಕ ಅಂತಿಮವಾಗಿ ದಂಪತಿಗಳು ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆದುಕೊಂಡಿದ್ದರು ಎಂದು ಹೇಳಿದ್ದಾರೆ. 

Leave a Reply

Your email address will not be published. Required fields are marked *

error: Content is protected !!