March 25, 2026

ಮೆಕ್‌ಡೊನಾಲ್ಡ್ಸ್ ತಂಪು ಪಾನೀಯದಲ್ಲಿ ಸತ್ತ ಹಲ್ಲಿ ಪತ್ತೆ

0
dead_lizard_1200x768.jpeg

ಅಹಮದಾಬಾದ್: ಗುಜರಾತ್‌ನ ಅಹಮದಾಬಾದ್‌ನಲ್ಲಿರುವ ಮೆಕ್ ಡೊನಾಲ್ಡ್‌ನ ತಂಪು ಪಾನೀಯದಲ್ಲಿ ಗ್ರಾಹಕರೊಬ್ಬರು ಹಲ್ಲಿ ತೇಲುತ್ತಿರುವುದನ್ನು ಕಂಡು ಆಘಾತಕ್ಕೊಳಗಾಗಿದ್ದಾರೆ.

ಭಾರ್ಗವ್ ಜೋಶಿ ಎಂಬ ಗ್ರಾಹಕ ತನ್ನ ತಂಪು ಪಾನೀಯದಲ್ಲಿ ಹಲ್ಲಿ ತೇಲುತ್ತಿರುವುದನ್ನು ಕಂಡು ಬೆಚ್ಚಿ ಬಿದ್ದಿರುವ ಅವರು, ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

ಹಲ್ಲಿ ತೇಲುತ್ತಿರುವುದನ್ನು ಟ್ವಿಟ್ ಮಾಡಿದ ಅವರು, ಸಿಬ್ಬಂದಿಯ ನಿರ್ಲಕ್ಷ್ಯವೇ ಇದಕ್ಕೆ ಕಾರಣ. ದೂರನ್ನು ಸ್ವೀಕರಿಸಬಹುದೆಂದು ನಾನು ಮತ್ತು ನನ್ನ ಸ್ನೇಹಿತರು ಕಾದೆವು. ಸಿಬ್ಬಂದಿ ಕೇವಲ 300 ರೂಪಾಯಿ ಮರುಪಾವತಿಯನ್ನು ಮಾತ್ರ ನೀಡಿದರು ಎಂದು ಅವರು ಹೇಳಿದ್ದಾರೆ.

ಗುಜರಾತ್‌ನ ಅಹಮದಾಬಾದ್‌ನಲ್ಲಿರುವ ಮೆಕ್ ಡೊನಾಲ್ಡ್‌ ಗೆ ತೆರಳಿದ ಅವರು ಬರ್ಗರ್ ಮತ್ತು ತಂಪು ಪಾನೀಯ ಆರ್ಡರ್ ಮಾಡಿದ್ದಾರೆ. ಹಲ್ಲಿ ತೇಲುತ್ತಿರುವ ತಂಪು ಪಾನೀಯವನ್ನು ನೀಡಿದ್ದಾರೆ. ಯಾರು ದೂರನ್ನು ತೆಗೆದುಕೊಂಡಿಲ್ಲ ಎಂದು ಆರೋಪಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!