ಮಣಿನಾಲ್ಕೂರು: ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು
ಬಂಟ್ವಾಳ: ಮನೆಯ ಮುಂಬಾಗಿಲು ಮುರಿದು ಮನೆಗೆ ನುಗ್ಗಿ ಲಕ್ಷಾಂತರ ರೂ ಮೌಲ್ಯದ ಬಂಗಾರವನ್ನು ಕಳ್ಳತನ ಮಾಡಿದ ಘಟನೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯ ಮಣಿನಾಲ್ಕೂರು ಎಂಬಲ್ಲಿ ನಡೆದಿದೆ.
ಮಣಿನಾಲ್ಕೂರು ಗ್ರಾಮದ ನೇಲ್ಯಪಲ್ಕೆ ನಿವಾಸಿ ಕರಿಯ ಮೂಲ್ಯ ಅವರ ಮನೆಯಿಂದ ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣ ಕಳವು ನಡೆದಿದೆ.
ಸುಮಾರು 2.50. ಲಕ್ಷ ಮೌಲ್ಯದ 9 ಪವನ್ ಚಿನ್ನವನ್ನು ಕಳವು ಮಾಡಲಾಗಿದೆ.
ಮಗಳು ಶ್ವೇತಾ ಅವರ ಮದುವೆ ಡಿಸೆಂಬರ್ ತಿಂಗಳಲ್ಲಿ ನಡೆಯಲಿರುವ ಕಾರಣ ಸುಮಾರು 9 ಪವನ್ ತೂಕದ ಕಿವಿಯೊಲೆ, ಕುತ್ತಿಗೆ ಚೈನ್ , ಸೇರಿದಂತೆ ಇನ್ನೂ ಕೆಲವು ಚಿನ್ನದಿಂದ ಮಾಡಿದ ಸೊತ್ತುಗಳನ್ನು ಮನೆಯ ಕಪಾಟಿನಲ್ಲಿ ಇರಿಸಿದ್ದರು.





