ಕಾಸರಗೋಡು: ನ್ಯಾಯಾಲಯಕ್ಕೆ ಆರೋಪಿಯನ್ನು ಕೊಂಡೊಯ್ಯುತ್ತಿದ್ದಾಗ ಎಸ್ಕೇಪ್:
20ಕ್ಕಿಂತಲೂ ಅಧಿಕ ಪ್ರಕರಣದ ಆರೋಪಿ
ಕಾಸರಗೋಡು: ಪೊಲೀಸರು ಆರೋಪಿಯೋರ್ವನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲು ಕರೆದೊಯ್ಯುತ್ತಿರುವ ಸಂದರ್ಭ ಎಸ್ಕೇಪ್ ಆಗಿ ತಪ್ಪಿಸಿಕೊಂಡ ಘಟನೆ ವಿದ್ಯಾನಗರದಲ್ಲಿ ನಡೆದಿದೆ.
ಆಲಂಪಾಡಿಯ ಆಮಿರಲಿ ಪರಾರಿಯಾದ ಆರೋಪಿ. ಈತನನ್ನು ಕಣ್ಣೂರು ಸೆಂಟ್ರಲ್ ಜೈಲಿನಿಂದ ಕಾಸರಗೋಡು ನ್ಯಾಯಾಲಯಕ್ಕೆ ಹಾಜರುಪಡಿಸಲು ಕರೆತರುತ್ತಿದ್ದಾಗ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಮಿರಲಿ ವಿದ್ಯಾನಗರ ಜಂಕ್ಷನ್ ಬಳಿ ತಪ್ಪಿಸಿ ಪರಾರಿಯಾಗಿದ್ದಾನೆ. ಈತ 20ಕ್ಕೂ ಅಧಿಕ ಪ್ರಕರಣಗಳಿಗೆ ಸಂಬಂಧಿಸಿದ ಆರೋಪಿಯಾಗಿದ್ದು, ಈತನಿಗಾಗಿ ಪೊಲೀಸರು ಶೋಧ ಆರಂಭಿಸಿದ್ದಾರೆ.