September 26, 2026

ಮತ್ತೆ ಕೋವಿಡ್ ಭೀತಿ:
ಭಾರತ ಸೇರಿದಂತೆ 16 ದೇಶಗಳಿಗೆ ಪ್ರಯಾಣ ನಿಷೇಧಿಸಿದ ಸೌದಿ ಅರೇಬಿಯಾ

0
IMG-20220523-WA0012.jpg

ಸೌದಿ ಅರೇಬಿಯಾ: ಕೊರೋನಾ ಸಾಂಕ್ರಾಮಿಕ ರೋಗ ಮತ್ತೆ ನಿಧಾನವಾಗಿ ಪ್ರಪಂಚದಲ್ಲಿ ತನ್ನ ದಾಪುಗಾಲು ಇಡುತ್ತಿದೆ. ಕೋವಿಡ್ ಮಂಗನ ಕಾಯಿಲೆ ಸುದ್ದಿ ಮಾಡುತ್ತಿದ್ದಂತೆ ಹಲವಾರು ದೇಶಗಳು ಈಗಾಗ್ಲೇ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುತ್ತಿವೆ. ಸದ್ಯ ಕೋವಿಡ್ ಅಧಿಕ ಸಂಖ್ಯೆ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾ 16 ದೇಶಗಳಿಗೆ ಪ್ರಯಾಣ ಬೆಳೆಸುವುದನ್ನು ಬ್ಯಾನ್ ಮಾಡಿದೆ.

ಪ್ರಯಾಣ ನಿಷೇಧವನ್ನು ಸೌದಿ ಸರ್ಕಾರದ ಡೈರೆಕ್ಟರೇಟ್ ಜನರಲ್ ಆಫ್ ಪಾಸ್‌ಪೋರ್ಟ್‌ಗಳು ತಿಳಿಸಿವೆ. ಹೌದು, ಕೋವಿಡ್ -19 ಮರು-ಏರಿಕೆ ಮತ್ತು ಕಳೆದ ಕೆಲವು ವಾರಗಳಲ್ಲಿ ದೈನಂದಿನ ಕೋವಿಡ್ ಸೋಂಕಿನ ಸಂಖ್ಯೆಯಲ್ಲಿ ತ್ವರಿತ ಏರಿಕೆಯ ನಂತರ, ಕಟ್ಟೆಚ್ಚರ ವಹಿಸಿರುವ ಸೌದಿ ಅರೇಬಿಯಾ ತನ್ನ ನಾಗರಿಕರಿಗೆ ಭಾರತ ಸೇರಿದಂತೆ ಹದಿನಾರು ದೇಶಗಳಿಗೆ ಪ್ರಯಾಣ ನಿಷೇಧ ಹೇರಿದೆ.

 

ಲೆಬನಾನ್, ಸಿರಿಯಾ, ಟರ್ಕಿ, ಇರಾನ್, ಅಫ್ಘಾನಿಸ್ತಾನ, ಯೆಮೆನ್, ಸೊಮಾಲಿಯಾ, ಇಥಿಯೋಪಿಯಾ, ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ದಿ ಕಾಂಗೋ, ಲಿಬಿಯಾ, ಇಂಡೋನೇಷಿಯಾ, ವಿಯೆಟ್ನಾಂ, ಅರ್ಮೇನಿಯಾ, ಬೆಲಾರಸ್, ವೆನೆಜುವೆಲಾ, ಭಾರತ ಸೇರಿದಂತೆ ಸೌದಿ ಅರೇಬಿಯಾದ ಪ್ರಜೆಗಳು ಬೇರೆ ದೇಶಗಳಿಗೆ ಪ್ರಯಾಣಿಸುವುದನ್ನು ನಿಷೇಧಿಸಿದೆ ಎಂದು ಗಲ್ಫ್ ನ್ಯೂಸ್ ವರದಿ ಮಾಡಿದೆ.

Leave a Reply

Your email address will not be published. Required fields are marked *

You may have missed

error: Content is protected !!