March 25, 2026

ದ್ವಿಚಕ್ರ ವಾಹನಕ್ಕೆ ಕಾರು ಢಿಕ್ಕಿ: ಫ್ಲೈ ಓವರ್ ಮೇಲಿಂದ ಕೆಳಗೆ ಬಿದ್ದು ಸವಾರ ಸಾವು

0
image_editor_output_image1611474189-1653286640515.jpg

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ವಾಹನ ಸವಾರ ಏರ್ಪೋರ್ಟ್ ಫ್ಲೈ ಓವರ್ ಮೇಲಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದಾನೆ.

ಬೆಂಗಳೂರಿನ ಜಕ್ಕೂರು ಏರೋಡ್ರಮ್ ಬಳಿ ಘಟನೆ ಸಂಭವಿಸಿದ್ದು, ಏರ್ಪೋರ್ಟ್ ಫ್ಲೈ ಓವರ್ ಮೇಲೆ ದ್ವಿಚಕ್ರ ವಾಹನದಲ್ಲಿ  45  ವರ್ಷದ ಸವಾರ ಮತ್ತು ಹಿಂಬದಿಯಲ್ಲಿ12 ವರ್ಷದ ಬಾಲಕನಿದ್ದ. ಎಡಬದಿಯಲ್ಲಿ ಹೋಗ್ತಿದ್ದ ಬೈಕ್ ಹಿಂದಿನಿಂದ ಬಂದ ಕಾರ್ ರಭಸವಾಗಿ ಗುದ್ದಿದೆ.

ಬೆಂಗಳೂರಿನ ಜಕ್ಕೂರು ನಿವಾಸಿ ಗೋವಿಂದಪ್ಪ ಮೃತ ವ್ಯಕ್ತಿ. ಮೃತರ ಹೆಂಡತಿ‌ಯ ಸಹೋದರಿಯ ಮಗ ಸಂಜಯ್ ಗಂಭೀರವಾಗಿ ಗಾಯಗೊಂಡಿದ್ದು, ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಳಗ್ಗೆ 7.15ರ ಸುಮಾರಿಗೆ ಘಟನೆ ನಡೆದಿದೆ. ಯಲಹಂಕ ಠಾಣೆ ಸಂಚಾರಿ ಪೊಲೀಸರು ಕಾರು ಚಾಲಕ ವರುಣ್​ನನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ‌.

Leave a Reply

Your email address will not be published. Required fields are marked *

error: Content is protected !!