March 25, 2026

ವಿಟ್ಲ: ಕಾರು ಚಾಲಕನ ಹುಚ್ಚಾಟಕ್ಕೆ ಬೆದರಿ ರಕ್ಷಣೆಗಾಗಿ ಮಹಿಳೆಯಿಂದ ಕಣ್ಣೀರು: ಅಪಹರಣವೆಂದು ತಿಳಿದು ಕಾರು ತಡೆದು ಮಹಿಳೆಯರನ್ನು ರಕ್ಷಿಸಿದ ಸಾಲೆತ್ತೂರಿನ ಯುವಕರು

0
image_editor_output_image1109211983-1653215868327

ವಿಟ್ಲ: ಟ್ರಾವೆಲ್ಸ್ ಕಾರು ಚಾಲಕನೋರ್ವ ಕಾರನ್ನು ವೇಗವಾಗಿ ಅಡ್ಡಾದಿಡ್ಡಿಯಾಗಿ ಓಡಿಸಿದ ಪರಿಣಾಮ ಕಾರಿನಲ್ಲಿದ್ದ ಮಹಿಳೆಯರು ಆತಂಕಗೊಂಡು ಕಿರುಚಾಡುತ್ತಿದ್ದ ವೇಳೆ ಸಾರ್ವಜನಿಕರು ಅಪಹರಣವೆಂದು ತಿಳಿದು ಅಡ್ಡಗಟ್ಟಿ, ಪೊಲೀಸರಿಗೆ ಮಾಹಿತಿ ನೀಡಿದ ಘಟನೆ ಸಾಲೆತ್ತೂರಿನಲ್ಲಿ ನಡೆದಿದೆ.

ಮಂಗಳೂರು ಹೊರ ವಲಯದ ತೊಕ್ಕೊಟ್ಟು ಪಿಲಾರಿನ ಮಹಿಳೆಯರು ಪಣೋಲಿಬೈಲಿಗೆ ತೆರಳುವ ಹಿನ್ನೆಲೆ ಕದ್ರಿಯಿಂದ ಬಾಡಿಗೆ ಕಾರಿನಲ್ಲಿ ಬಂದಿದ್ದರು ಎನ್ನಲಾಗಿದೆ.

ಈ ವೇಳೆ ಕಾರು ಚಾಲಕ ಕಾಡುಮಠ ನಿವಾಸಿ ಸಾಗರ್(26) ಎಂಬಾತ ಕಾರನ್ನು ವೇಗವಾಗಿ ಅಡ್ಡಾದಿಡ್ಡಿಯಾಗಿ ಓಡಿಸಿದ್ದು, ಗಾಬರಿಗೊಂಡ ಮಹಿಳೆಯರು ನೆರವಿಗಾಗಿ ಬೊಬ್ಬೆ ಹೊಡೆಯುತ್ತಿದ್ದ ವೇಳೆ ಸಾರ್ವಜನಿಕರು ಅಪಹರಣವೆಂದು ತಿಳಿದು ಕಾರನ್ನು ತಡೆದು ನಿಲ್ಲಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದು, ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸರು ಕಾರು ಚಾಲಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!