July 6, 2026

ವಿಟ್ಲ: ಮನೆಯ ಮಾಡಿನ ಹಂಚು ತೆಗೆದು ನುಗ್ಗಿದ ಕಳ್ಳರು, ನಗದು, ಚಿನ್ನಾಭರಣ ದೋಚಿ ಪರಾರಿ

0
IMG-20220521-WA0040.jpg

ವಿಟ್ಲ: ಮನೆಯ ಮಾಡಿನ ಹಂಚು ತೆಗೆದು ಮನೆಗೆ ನುಗ್ಗಿದ ಕಳ್ಳರು ನಗದು, ಚಿನ್ನಾಭರಣ ದೋಚಿ ಪರಾರಿಯಾದ ಘಟನೆ ಬಂಟ್ವಾಳ ತಾಲೂಕು ಕೊಳ್ನಾಡು ಗ್ರಾಮದ ಕಟ್ಟೆ ಮನೆ ಎಂಬಲ್ಲಿ ನಡೆದಿದೆ.

ಈ ಘಟನೆ ಕೊಳ್ನಾಡು ಗ್ರಾಮ ಕಟ್ಟೆ ಮನೆ ನಿವಾಸಿ ಕೆ.ಎಂ ಮಹಮ್ಮದ್(60) ಎನ್ನುವವರ ಮನೆಯಲ್ಲಿ ನಡೆದಿದ್ದು, ಮನೆಗೆ ನಗ್ಗಿದ ಕಳ್ಳರು ಸುಮಾರು 5 ಪವನ್ ತೂಕದ ನಕ್ಲೇಸ್-01, ಸುಮಾರು 1 ಪವನ್ ತೂಕದ ಸರ-01, ಸುಮಾರು ಅರ್ದ ಪವನ್ ತೂಕದ ಉಂಗುರ-01, ಹಾಗೂ ಗಾದ್ರೇಜ್ ಪಕ್ಕದಲ್ಲಿದ್ದ ಮೇಜಿನ ಡ್ರಾವರ್ ಒಳಗೆ ಇದ್ದ 5000/- ನಗದು ದೋಚಿದ್ದಾರೆ ಎನ್ನಲಾಗಿದೆ.


ದಿನಾಂಕ: 19-5-2022 ರಂದು ಸಮಯ ಸಂಜೆ ಸುಮಾರು 7.00 ಗಂಟೆಗೆ ಬೀಗ ಹಾಕಿ ತಮ್ಮ ಮನೆಯವರೊಂದಿಗೆ ತಮ್ಮ ತಂಗಿಯ ಮನೆಗೆ ಹೋಗಿದ್ದು. ದಿನಾಂಕ 20-5-2022 ರಂದು ತಮ್ಮ ಮನೆಗೆ ಬಂದಾಗ ಬೀಗ ತೆಗೆದು ಮನೆಯ ಒಳಗೆ ನೋಡುವಾಗ ಬಟ್ಟೆಗಳು ಚಲ್ಲಾಪಿಲ್ಲಿಯಾಗಿದ್ದು.

ಮನೆಯ ಮಾಡಿನ ಹಂಚು ತೆಗೆದಿರುವುದು ಕಂಡು ಬಂತು ನಂತರ ಕೆ.ಎಂ ಮಹಮ್ಮದ್ ಮಲಗುವ ಕೋಣೆಗೆ ಹೋದಾಗ ಗಾದ್ರೇಜ್ ಬಾಗಿಲು ತೆರೆದಿರುವುದು ಕಂಡು ಬಂದು ಕಳ್ಳತನದ ಬಗ್ಗೆ ತಿಳಿದಿದೆ. ಕಳ್ಳತನವಾದ ಚಿನ್ನಾಭರಣಗಳ ಮೌಲ್ಯ 1,40,000/- ರೂ ಆಗಬಹುದು ಎಂದು ತಿಳಿದು ಬಂದಿದೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



Leave a Reply

Your email address will not be published. Required fields are marked *

You may have missed

error: Content is protected !!