September 26, 2026

ಮಲ್ಪೆ: ಮೀನುಗಾರಿಕೆ ಮುಗಿಸಿಕೊಂಡು ಸ್ಕೂಟರ್ ನಲ್ಲಿ ತರಳುತ್ತಿದ್ದ ವೇಳೆ ಹೃದಯಾಘಾತದಿಂದ ಸಾವು

0
Screenshot_2022-05-20-10-37-52-02_680d03679600f7af0b4c700c6b270fe7.jpg

ಮಲ್ಪೆ: ಮೀನುಗಾರಿಕೆ ಮುಗಿಸಿಕೊಂಡು ಸ್ಕೂಟರ್ ನಲ್ಲಿ ಹಿಂಬದಿ ಸವಾರನಾಗಿ ಮನೆಗೆ ತೆರಳುತ್ತಿದ್ದ ಸಂದರ್ಭ ಹೃದಯಾಘಾತದಿಂದ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಮಲ್ಪೆ ಕಂಬಳತೋಟ ಎಂಬಲ್ಲಿ ಮೇ.18ರಂದು ನಡೆದಿದೆ.

ಮೃತರನ್ನು ಮಲ್ಪೆ ಕಂಬಳತೋಟ ನಿವಾಸಿ ಪ್ರತಾಪ್ (32) ಎಂದು ಗುರುತಿಸಲಾಗಿದೆ.

 

ಬೆಳಗ್ಗೆ ಮೀನುಗಾರಿಕೆ ಕೆಲಸ ಮುಗಿಸಿಕೊಂಡು ಅಕ್ಕನ ಮಗ ಕಿರಣ್ ಅವರ ಸ್ಕೂಟರ್ ನಲ್ಲಿ ಹಿಂಬದಿ ಸವಾರನಾಗಿ ಮನೆಗೆ ಹೋಗುತ್ತಿದ್ದರು. ಈ ವೇಳೆ ಪ್ರತಾಪ್ ಅಸ್ವಸ್ಥಗೊಂಡು ಕಿರಣ್ ಮೈಮೇಲೆ ಬಿದ್ದಿದ್ದರು.

ತಕ್ಷಣವೇ ಕಲ್ಯಾಣಪುರ ಗೊರಟ್ಟಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿ ಹೈಟೆಕ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಅಲ್ಲಿ ಪರೀಕ್ಷಿಸಿದ ವೈದ್ಯರು ಪ್ರತಾಪ್ ಆದಾಗಲೇ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!