February 1, 2026

“ಮೈಸೂರು ಹುಲಿ” ನಾಲ್ವಡಿ ಕೃಷ್ಣ ರಾಜ್ ಒಡೆಯರ್, ಟಿಪ್ಪು ಸುಲ್ತಾನ್ ಅಲ್ಲ: ಸಂಸದ ಪ್ರತಾಪ್ ಸಿಂಹ

0
image_editor_output_image1013569028-1652949296709.jpg

ಮೈಸೂರು: ಎಂದಿಗೂ ಮೈಸೂರು ಹುಲಿ ನಾಲ್ವಡಿ ಕೃಷ್ಣ ರಾಜ್ ಒಡೆಯರ್ ಅವರೇ. ನಮ್ಮ ಹುಲಿ ಕೆ.ಆರ್.ಎಸ್. ಕಟ್ಟಿದ್ದಾರೆ. ಬೆಂಗಳೂರಿಗೆ ಕರೆಂಟ್ ಕೊಟ್ಟರು. ಅವರೇ ಎಂದಿಂಗೂ ನಮ್ಮ ಹುಲಿ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟಿಪ್ಪು ಸುಲ್ತಾನ್ ಮೈಸೂರು ಹುಲಿ ಯಾವಾಗ ಆಗಿದ್ದ? ಯಾವ ಹುಲಿ ಕೊಂದಿದ್ದನಂತೆ. ಪೋಸ್ಟರ್ ಗಳಲ್ಲಿ ಹುಲಿ ಚಿತ್ರಗಳನ್ನು ಹಾಕಿಬಿಟ್ಟರೆ ಮೈಸೂರು ಹುಲಿ ಆಗಬಿಡ್ತಾನ? ಮೂರನೇ ಮತ್ತು ನಾಲ್ಕನೇ ಆಂಗ್ಲೋ ಮೈಸೂರು ಯುದ್ದದಲ್ಲಿ ಟಿಪ್ಪು ಸುಲ್ತಾನ್ ಯಾವ ರಣರಂಗದಲ್ಲಿ ಹೋರಾಟ ಮಾಡಿದ್ದ? ಟಿಪ್ಪು ಸುಲ್ತಾನ್ ಕೋಟೆಯೊಳಗೆ ಸತ್ತಿದ್ದು. ಆದರೆ ಹುಲಿ ಎಂದಿಗೂ ಬೋನ್ ನಲ್ಲಿ ಸಾಯುವುದಿಲ್ಲ ಎಂದು ಟೀಕಿಸಿದರು.

Leave a Reply

Your email address will not be published. Required fields are marked *

error: Content is protected !!