July 6, 2026

ವಿಟ್ಲ- ಕಲ್ಲಡ್ಕ ರಸ್ತೆಗೆ ಬಿದ್ದ ವಿದ್ಯುತ್ ಕಂಬ: ವಾಹನ ಸಂಚಾರ ಅಸ್ತವ್ಯಸ್ತ

0
image_editor_output_image206325127-1652851582363.jpg

ವಿಟ್ಲ: ವಿಟ್ಲ- ಕಲ್ಲಡ್ಕ ರಸ್ತೆಯಲ್ಲಿ ಮಂಗಳವಾರ ಸುರಿದ ಮಳೆಗೆ ವಿದ್ಯುತ್ ಕಂಬ ರಸ್ತೆಗೆ ಅಡ್ಡಲಾಗಿ ಬಿದ್ದ ಪರಿಣಾಮ ಬುಧವಾರ ಬೆಳಿಗ್ಗೆ ಸುಮಾರು 9.30 ತನಕ ರಸ್ತೆ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿತ್ತು.

ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಹಿಂಭಾಗದ ರಸ್ತೆಯಲ್ಲಿ ಕಂಬ ಬಿದ್ದಿದ್ದು, ಕಂಬದೊಂದಿಗೆ ದೀವಿ ಹಲಸು ಮರದ ದೊಡ್ಡ ಗಾತ್ರದ ಕೊಂಬೆ ಬಿದ್ದಿತ್ತು. ಬೆಳಗಿನ ಜಾವದಲ್ಲಿ ಬರುವ ಎಲ್ಲಾ ವಾಹನಗಳು ಅಗಲ ಕಿರಿದಾದ ಪಳಿಕೆ ರಸ್ತೆ ಯನ್ನು ಬಳಸಿ ಬೊಬ್ಬೆಕೇರಿ ಸಂಪರ್ಕ ರಸ್ತೆಯ ಮೂಲಕ ಸಂಚರಿಸಿದವು.

ಎರಡೂ ಬದಿಗಳಲ್ಲಿ ವಾಹನಗಳು ಸಂಚರಿಸಿದ ಕಾರಣ ತಾಸುಗಟ್ಟಲೆ ಕಾಲ ಸಂಚಾರ ಸ್ಥಗಿತಗೊಂಡಿತ್ತು. ವಿಟ್ಲ ಪೊಲೀಸರು, ಸಾರ್ವಜನಿಕರ ಸಹಕಾರದೊಂದಿಗೆ ಸುಗಮ ಸಂಚಾರಕ್ಕೆ ಸಹಕರಿಸಿದರು. ಮೆಸ್ಕಾಂ ಸಿಬ್ಬಂದಿಗಳು ಸಕಾಲಿಕ ವಾಗಿ ಕಂಬ ತೆರವುಗೊಳಿಸಿದರು.

Leave a Reply

Your email address will not be published. Required fields are marked *

You may have missed

error: Content is protected !!