ಕಾಸರಗೋಡು: ಭಾರೀ ಮೌಲ್ಯದ ಎಂಡಿಎಂಎ ಮಾದಕ ವಸ್ತು ಸಹಿತ ಇಬ್ಬರ ಬಂಧನ
ಕಾಸರಗೋಡು: ಬೆಂಗಳೂರಿನಿಂದ ಕಾಸರಗೋಡಿಗೆ ಭಾರೀ ಮೌಲ್ಯದ ಎಂಡಿಎಂಎ ಮಾದಕ ವಸ್ತು ಸಹಿತ ಇಬ್ಬರನ್ನು ಆದೂರು ಪೊಲೀಸರು ಬಂಧಿಸಿದ್ದಾರೆ.
ಉದುಮದ ಫ್ಯಾಮಿಲಿ ರೆಸ್ಟಾರೆಂಟ್ ಮಾಲಕ ಈಚಿಲುಂಗಾಲ್ ಹುಸೈನ್ ಹೌಸ್‌ನ ಎನ್.ಮುನೀರ್(28) ಮುಳಿಯಾರು ಮೂಲಡ್ಕದ ಎ.ನಿಸಾಮುದ್ದೀನ್(27) ನನ್ನು ಕುಂಟಾರು ಮಸೀದಿ ಪರಿಸರದಿಂದ ಆದೂರು ಪೊಲೀಸರು ಬಂಧಿಸಿದರು.
ಪೊಲೀಸರಿಗೆ ಲಭಿಸಿದ ಖಚಿತ ಮಾಹಿತಿಯಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು ಜೀಪನ್ನು ತಡೆದು ತಪಾಸಣೆ ನಡೆಸಿದಾಗ ಮಾದಕ ವಸ್ತು ಪತ್ತೆಯಾಗಿದೆ.




