ಇಂದಿನಿಂದ ಸೆ. 15ವರೆಗೆ ಮಲ್ಪೆ ಸೀವಾಕ್, ಸೈಂಟ್‌ಮೇರೀಸ್ ಐಲ್ಯಾಂಡ್‌ಗೆ ಬೋಟ್ ಯಾನ ನಿಷೇಧ
ಮಲ್ಪೆ: ಅಸಾನಿ ಚಂಡ ಮಾರುತದಿಂದಾಗಿ ಕಡಲ ಅಬ್ಬರ ಹೆಚ್ಚಿದ್ದು, ಈ ಹಿನ್ನೆಲೆಯಲ್ಲಿ ಕಡಲತೀರ, ಬೀಚ್ ಗಳಲ್ಲಿ ಪ್ರವಾಸಿಗರು ನೀರಿಗಿಳಿಯದಂತೆ, ಜಲಸಾಹಸ ಕ್ರೀಡೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಸೂಚಿಸಿದ್ದಾರೆ. ಮೇ 8ರ ಮಧ್ಯಾಹ್ನದಿಂದಲೇ ಬಹುತೇಕ ಕರಾವಳಿಯಲ್ಲಿ ಬೀಚ್ ನಿಷೇಧ ಮಾಡಲಾಗಿದೆ.
ವಾರಾಂತ್ಯದ ಹಿನ್ನೆಲೆಯಲ್ಲಿ ಶನಿವಾರ, ರವಿವಾರ ಬೆಳಗ್ಗಿನಿಂದಲೇ ಹೆಚ್ಚಿನ ಪ್ರವಾಸಿಗರು ಮಲ್ಪೆ ಕಡೆಗೆ ಆಗಮಿಸಿದ್ದು ಬೀಚ್‌ನಲ್ಲಿ ಜನಸಂದಣಿ ಕಂಡು ಬಂದಿದೆ.
ಮಲ್ಪೆ ಸೀವಾಕ್ ಬಳಿ ಮತ್ತು ಮಲ್ಪೆ ಬೀಚ್ ನಿಂದ ಸೈಂಟ್‌ಮೇರೀಸ್ ಐಲ್ಯಾಂಡ್‌ಗೆ ಹೊರಡುವ ಪ್ರವಾಸಿ ಬೋಟ್ ಯಾನ ಮತ್ತು ಬೀಚ್‌ನಲ್ಲಿ ನಡೆಯುವ ಜಲಸಾಹಸ ಕ್ರೀಡೆಗಳನ್ನು ಮಳೆಗಾಲದಲ್ಲಿ ಸಮುದ್ರ ಪ್ರಕ್ಷುಬ್ದವಾಗಿರುವ ಹಿನ್ನೆಲೆಯಲ್ಲಿ ಪ್ರತೀ ವರ್ಷದಂತೆ ಈ ವರ್ಷವೂ ಮೇ 16ರಿಂದ ಸೆ. 15ರ ವರೆಗೆ ನಿಷೇಧ ವಿಧಿಸಲಾಗಿದೆ. ಈ ಅವಧಿಯಲ್ಲಿ ಪಶ್ಚಿಮ ಕರಾವಳಿ ಯಲ್ಲಿ ಬೋಟ್ ಚಲಾಯಿಸಲು ಅನುಮತಿ ಇರುವುದಿಲ್ಲ




