February 2, 2026

ಬಂಗಾಳಿ ಕಿರುತೆರೆ ನಟಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

0
pic.png

ಕೋಲ್ಕತ್ತಾ: ಬಂಗಾಳಿ ಕಿರುತೆರೆ ನಟಿ ಪಲ್ಲವಿ ಡೇ ಅವರು ಕೋಲ್ಕತ್ತಾದ ಗರ್ಫಾ ಪ್ರದೇಶದಲ್ಲಿನ ತಮ್ಮ ಫ್ಲಾಟ್‌ ನಲ್ಲಿ ಭಾನುವಾರ ಬೆಳಗ್ಗೆ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

20 ವರ್ಷದ ಯುವ ನಟಿಯನ್ನು ತತ್‌ಕ್ಷಣ ಬಂಗೂರ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಆಕೆ ಅದಾಗಲೇ ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದರು.

ಪ್ರಾಥಮಿಕ ತನಿಖೆಯ ನಂತರ, ಇದು ಆತ್ಮಹತ್ಯೆ ಪ್ರಕರಣವೆಂದು ತೋರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ. ಪಲ್ಲವಿ ಅವರ ದೇಹವು ಸೀಲಿಂಗ್ ಫ್ಯಾನ್ ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಬಂಗಾಳ ಪೊಲೀಸರು ಅಸ್ವಾಭಾವಿಕ ಸಾವಿನ ಪ್ರಕರಣವನ್ನು ದಾಖಲಿಸುವ ಮೂಲಕ ತನಿಖೆಯನ್ನು ಪ್ರಾರಂಭಿಸಿದ್ದಾರೆ.

ಬಂಗಾಳಿ ಟಿವಿ ನಟಿ ‘ಮೋನ್ ಮಾನೆ ನಾ’ ಚಿತ್ರದಲ್ಲಿ ಗೌರಿಯಾಗಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಲು ಹೆಸರುವಾಸಿಯಾಗಿದ್ದರು. ಅವರು ರೇಶಮ್ ಜಾಪಿ, ಸರಸ್ವತಿ ಪ್ರೇಮ್ ಮತ್ತು ಅಮಿ ಸಿರಾಜೆರ್ ಬೇಗಂ ಸೇರಿದಂತೆ ಹಲವಾರು ಇತರ ಕಾರ್ಯಕ್ರಮಗಳಲ್ಲಿ ಕೆಲಸ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!