February 2, 2026

ಸುರತ್ಕಲ್‌: ಕಡಲ ಕಿನಾರೆಯಲ್ಲಿನ ತೈಲ ಜಿಡ್ಡು ಹಿಡಿದಿರುವ ನೀರಿನ ಮಾದರಿ ತಪಾಸಣೆಗೆ ರವಾನೆ

0
Screenshot_20220515-123148_Chrome.jpg

ಮಂಗಳೂರು: ಸುರತ್ಕಲ್‌ನ ದೊಡ್ಡಕೊಪ್ಪಲು ಕಡಲ ಕಿನಾರೆಯಲ್ಲಿ ಕಂಡು ಬಂದಿರುವ ತೈಲ ಜಿಡ್ಡಿನ ಬಗ್ಗೆ ದ.ಕ.ಜಿಲ್ಲಾಧಿಕಾರಿಯವರ ನೇತೃತ್ವದಲ್ಲಿ ತನಿಖೆ ಆರಂಭವಾಗಿದೆ.

ಇದೀಗ ಡಿಡಿಎಂಎ, ಎಂಆರ್ಪಿಎಲ್, ಎಂಇಝಡ್ ಅಧಿಕಾರಿಗಳೊಂದಿಗೆ ಸ್ಥಳಕ್ಕೆ‌ ಭೇಟಿ‌ ನೀಡಿರುವ ಜಿಲ್ಲಾಧಿಕಾರಿ, ಕಡಲ ಕಿನಾರೆಯಲ್ಲಿ ಪತ್ತೆಯಾಗಿರುವ ತೈಲ ಜಿಡ್ಡು ನೀರಿನ ಮಾದರಿಯನ್ನು ಸಂಗ್ರಹಿಸಿ, ತಪಾಸಣೆಗಾಗಿ ಸಿಎಂಎಫ್ಆರ್ಐಗೆ‌ ಕಳುಹಿಸಲಿದ್ದಾರೆ.

ಸಮುದ್ರ ತೀರದಲ್ಲಿ ಪತ್ತೆಯಾದ ತ್ಯಾಜ್ಯದ ಪ್ರಾಥಮಿಕ ತನಿಖೆ‌ ನಡೆಸಿದ್ದು, ಅದು ಪಾಚಿಯಂತೆ ಕಂಡು ಬರುತ್ತಿದೆ. ಸಾಮಾನ್ಯವಾಗಿ ಮಳೆಗಾಲ ಆರಂಭಕ್ಕಿಂತಲೂ ಮುಂಚೆ ಕಡಲ ತೀರದಲ್ಲಿ ಕಂಡು ಬರುವ ಪಾಚಿಯಂತೆ ಗೋಚರಿಸುತ್ತಿದೆ. ಹೆಚ್ಚಿನ ಗಾಳಿ ಮತ್ತು ಅಲೆಗಳ ಘರ್ಷಣೆಯಿಂದ ಕಡಲಿನ ತಳಭಾಗದಲ್ಲಿರುವ ಕೆಸರು ಮೇಲಕ್ಕೆ ಬರುವುದರಿಂದ ಈ ರೀತಿ ಕಾಣಿಸಿಕೊಳ್ಳುತ್ತದೆ. ಆದರೂ ತೈಲ ಮತ್ತು ಗ್ರೀಸ್ ಪರೀಕ್ಷೆಗಾಗಿ ಇದರ ಮಾದರಿಯನ್ನು ತಪಾಸಣೆಗೆ ಕಳುಹಿಸಲಾಗಿದೆ. ವರದಿಯನ್ನು ನಿರೀಕ್ಷಿಸಲಾಗುತ್ತಿದೆ ಎಂದು ದ.ಕ ಜಿಲ್ಲಾಧಿಕಾರಿ ಡಾ. ಕೆ.ವಿ ರಾಜೇಂದ್ರ ಅವರು ಮಾಹಿತಿ ನೀಡಿದ್ದಾರೆ.

ಸುರತ್ಕಲ್​ನ ದೊಡ್ಡಕೊಪ್ಪಲು ಕಡಲ ತೀರದಲ್ಲಿ ಅಲೆಗಳೊಂದಿಗೆ ಭಾರಿ ಪ್ರಮಾಣದಲ್ಲಿ ತೈಲ ಜಿಡ್ಡು ಕಂಡು ಬರುತ್ತಿರುವುದು ಶುಕ್ರವಾರ ಬೆಳಕಿಗೆ ಬಂದಿತ್ತು.

Leave a Reply

Your email address will not be published. Required fields are marked *

error: Content is protected !!