March 21, 2026

ಆ್ಯಸಿಡ್ ಎರಚಿದ ಆರೋಪಿ ನಾಗೇಶ್‌‌ ಪರಾರಿಯಾಗಲು ಯತ್ನ: ಫೈರಿಂಗ್ ಮಾಡಿದ ಪೊಲೀಸರು!

0
image_editor_output_image-1803339313-1652508867227.jpg

ಬೆಂಗಳೂರು: ಬೆಂಗಳೂರಿನಲ್ಲಿ ಯುವತಿ ಮೇಲೆ ಆಸಿಡ್ ಎರಚಿದ ಆರೋಪಿ ನಾಗೇಶ್‌‌ನನ್ನು ಬಂಧಿಸಿ ಕರೆ ತರುವ ವೇಳೆ ಆತ ಪೊಲೀಸರಿಂದ ತಪ್ಪಿಸಿಕೊಳ್ಳುವ ಯತ್ನ ನಡೆಸಿದ್ದು, ಇದಕ್ಕಾಗಿ ಆತನ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ.

ಆರೋಪಿಯನ್ನು ಪೊಲೀಸ್ ವಾಹನದಲ್ಲಿ ಕರೆ ತರುವ ವೇಳೆ ಪದೇಪದೇ ಆತನ ಮೂತ್ರ ವಿಸರ್ಜನೆಗೆ ವಾಹನ ನಿಲ್ಲಿಸುವಂತೆ ಹೇಳುತ್ತಿದ್ದ. ಹೀಗಾಗಿ ನೈಸ್ ರಸ್ತೆಯ ಬಳಿ ವಾಹನ ನಿಲ್ಲಿಸಲಾಗಿತ್ತು.

ಇದೇ ಸಂದರ್ಭ ಬಳಸಿಕೊಂಡ ಆರೋಪಿ ಪಿಸಿ ಮಹದೇವಯ್ಯ ಅವರ ಮೇಲೆ ಕಲ್ಲಿನಿಂದ ಹಲ್ಲೆಗೆ ಯತ್ನಿಸಿ ಪರಾರಿಯಾಗಲು ಪ್ರಯತ್ನಿಸಿದ. ತತ್‌ಕ್ಷಣ ಕಾರ್ಯತತ್ಪರರಾದ ಪೊಲೀಸರು ಆತನ ಬಲಗಾಲಿಗೆ ಗುಂಡು ಹಾರಿಸಿದರು.

ಇದರಿಂದ ಆತನ ಪರಾರಿ ಯತ್ನ ವಿಫಲವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಕಾಮಾಕ್ಷಿಪಾಳ್ಯ ಠಾಣೆ ಇನ್ಸ್ಪೆಕ್ಟರ್ ಪ್ರಶಾಂತ್ ಫೈರಿಂಗ್ ಮಾಡಿದ್ದಾರೆ.

ತಮಿಳುನಾಡಿನಲ್ಲಿ ಸ್ವಾಮೀಜಿಯಂತೆ ವೇಷ ಬದಲಿಸಿ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದರು.

Leave a Reply

Your email address will not be published. Required fields are marked *

You may have missed

error: Content is protected !!