March 20, 2026

ಯುವತಿ ಮೇಲೆ ಆ್ಯಸಿಡ್ ದಾಳಿ ನಡೆಸಿ ತಲೆಮರೆಸಿಕೊಂಡಿದ್ದ ಆರೋಪಿ ನಾಗೇಶ್‌ ಪತ್ತೆ

0
image_editor_output_image-1806341263-1652447284957.jpg

ಬೆಂಗಳೂರು: ಯುವತಿ ಮೇಲೆ ಆ್ಯಸಿಡ್ ದಾಳಿ ನಡೆಸಿ ತಲೆಮರೆಸಿಕೊಂಡಿದ್ದ ಆರೋಪಿ ನಾಗೇಶ್‌ ನನ್ನ ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಹುಡುಕಾಟ ನಡೆಸುತ್ತಿದ್ದ ವೇಳೆ ತಮಿಳುನಾಡಿನ ತಿರುವಣ್ಣಾಮಲೈ ನಲ್ಲಿ ಸ್ವಾಮೀಜಿಯಂತೆ ವೇಷ ಧರಿಸಿ ತಲೆ ಮರೆಸಿಕೊಂಡಿದ್ದ 27 ವರ್ಷದ ನಾಗೇಶನನ್ನು ಪೊಲೀಸರು ಬಂಧಿಸಿದ್ದಾರೆ.

ಏಪ್ರಿಲ್ 28 ರಂದು ದಾಳಿ ನಡೆಸಿ ಪರಾರಿಯಾಗಿದ್ದ. ಆ್ಯಸಿಡ್ ದಾಳಿ ನಡೆದು 16 ದಿನ ಕಳೆದರೂ ಆರೋಪಿ ನಾಗೇಶ್ ಸುಳಿವು ಸಿಗದೆ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿತ್ತು. ಕಾಮಾಕ್ಷಿಪಾಳ್ಯ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿ ನಾಗೇಶನನ್ನು ಬಂಧಿಸಿದೆ ಎಂದು ವರದಿಗಳು ಲಭ್ಯವಾಗಿವೆ.

ನಾಗೇಶ್ ಓಡಾಡಿದ ಜಾಗದಲ್ಲಿ ವಾಂಟೆಡ್‌ ಲಿಸ್ಟ್‌ ಫೋಟೋ ಹಾಕಲಾಗಿತ್ತು. ಜತೆಗೆ ಎಲ್ಲೆಡೆ ಕರಪತ್ರಗಳನ್ನು ಹಚ್ಚಲಾಗಿತ್ತು.

Leave a Reply

Your email address will not be published. Required fields are marked *

error: Content is protected !!