March 20, 2026

ಕಾಸರಗೋಡು: ಮಾದಕ ವಸ್ತು ಮಾರಾಟ, ಆಲಂಪ್ಪಾಡಿಯ ವ್ಯಕ್ತಿಯ ಬಂಧನ

0
image_editor_output_image1100554195-1652423076337.jpg

ಕಾಸರಗೋಡು: ಮಾದಕ ವಸ್ತು ಸಹಿತ ಓರ್ವ ನನ್ನು ಬದಿಯಡ್ಕ ಠಾಣಾ ಪೊಲೀಸರು ಬಂಧಿಸಿದ್ದು, ಈತನಿಂದ ಕೃತ್ಯಕ್ಕೆ ಬಳಸಿಕ್ದ ಕಾರನ್ನು ವಶಪಡಿಸಿ ಕೊಂಡಿದ್ದಾರೆ.

ಆಲಂಪ್ಪಾಡಿಯ ಅಮೀರಾಲಿ (23) ಬಂಧಿತ ಆರೋಪಿಯಾಗಿದ್ದಾನೆ. ವಾಹನ ತಪಾಸಣೆ ಸಂದರ್ಭದಲ್ಲಿ ಈ ದಾರಿಯಾಗಿ ಬಂದ ಕಾರನ್ನು ತಪಾಸಣೆ ನಡೆಸಿದಾಗ 8.640 ಗ್ರಾಂ ಮಾದಕ ವಸ್ತು, ಮೂರು ಮೊಬೈಲ್ ಮೊದಲಾದವುಗಳನ್ನು ವಶಪಡಿಸಿಕೊಂಡಿದ್ದಾರೆ .

ಈತನ ವಿರುದ್ದ ಕಣ್ಣೂರು, ಕಾಸರಗೋಡು ,ಮಂಗಳೂರು ಮೊದಲಾದೆಡೆ ಗಳಲ್ಲಿ ಹಲವಾರು ಪ್ರಕರಣ ಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಮಾರಾಟಕ್ಕೆಂದು ಈತ ಪ್ಯಾಕೆಟ್ ಗಳಲ್ಲಿ ಮಾದಕವಸ್ತುವನ್ನು ಕಾರಿನಲ್ಲಿ ಕೊಂಡೊಯ್ಯುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ

Leave a Reply

Your email address will not be published. Required fields are marked *

error: Content is protected !!