July 3, 2026

ರಿಫಾ ಮೆಹನು ಕೊಲೆ ಶಂಕೆ: ಪತಿಯ ಪತ್ತೆಗೆ ಲುಕ್ ಔಟ್ ನೋಟಿಸ್ ಜಾರಿಗೊಳಿಸಿದ ಪೊಲೀಸ್

0
image_editor_output_image1640745525-1652422420177.jpg

ಕಾಸರಗೋಡು: ವ್ಲಾಗರ್ ರಿಫಾ ಮಹನು ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಪತಿ ಮಹನಾಜ್ ವಿರುದ್ಧ ಪೊಲೀಸರು ಲುಕ್‌ಔಟ್ ನೋಟಿಸ್ ಜಾರಿ ಮಾಡಿದ್ದಾರೆ.

ಹಲವು ಬಾರಿ ಮನವಿ ಮಾಡಿದರೂ ಅವರು ಪೊಲೀಸರ ತನಿಖೆಗೆ ಹಾಜರಾಗಿಲ್ಲ ಎಂದು ನೋಟಿಸ್ ನಲ್ಲಿ ತೋರಿಸಲಾಗಿದೆ. ದುಬೈನಲ್ಲಿ ನಿಧನರಾದ ರಿಫಾ ಅವರ ಅಂತ್ಯಕ್ರಿಯೆಯನ್ನು ಮನೆಯಲ್ಲೇ ನೆರವೇರಿಸಲಾಗಿತ್ತು.

ಪತಿ ಥಳಿಸಿದ್ದಾರೆ ಹಾಗೂ ಸಾವಿನಲ್ಲಿ ನಿಗೂಢತೆ ಇದೆ ಎಂದು ಸಂಬಂಧಿಕರು ದೂರು ನೀಡಿದ ಹಿನ್ನೆಲೆಯಲ್ಲಿ ನಿನ್ನೆ ರಿಫಾ ಮೃತದೇಹವನ್ನು ಹೊರತೆಗೆಯಲಾಗಿತ್ತು. ವಿಧಿವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ಲಿಸಾ ಜಾನ್ ನೇತೃತ್ವದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು.ಇದೀಗ ರೀಪಾರ ಪತಿ ತನಿಖೆಗೆ ಹಾಜರಾಗದ ಹಿನ್ನಲೆಯಲ್ಲಿ ಪೊಲೀಸರು ಲುಕ್ ಔಟ್ ನೋಟಿಸು ನೀಡಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!