February 2, 2026

ಕಾಂಗ್ರೆಸ್ ಆಂತರಿಕ ಜಗಳದಿಂದ ಬಿಜೆಪಿಗೆ 50 ಸೀಟುಗಳು ಹೆಚ್ಚಿಗೆ ಬರಲಿದೆ: ನಳಿನ್ ಕುಮಾರ್ ಕಟೀಲು

0
image_editor_output_image-1004344742-1652420266543.jpg

ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿ ಈಗಾಗಲೇ ಕುರ್ಚಿಗಾಗಿ ಕಿತ್ತಾಟ ಪ್ರಾರಂಭವಾಗಿದ್ದು, ಇವರ ಆಂತರಿಕ ಜಗಳದಿಂದಲೇ ನಮಗೆ 50 ಸೀಟುಗಳು ಹೆಚ್ಚಿಗೆ ಬರಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಭವಿಷ್ಯ ನುಡಿದಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಕುರ್ಚಿಗಾಗಿ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ನಡುವೆ ಜಿದ್ದಾಜಿದ್ದಿ ನಡೆಯುತ್ತಿದೆ. ಮುಂಚೂಣಿಯಲ್ಲಿದ್ದ ಪರಮೇಶ್ವರ್ ಅವರನ್ನ ಮುಗಿಸಿದ್ದು ಬೇರೆ ಯಾರೂ ಅಲ್ಲ,‌ಸ್ವಪಕ್ಷೀಯರೇ, ಇನ್ನು ಸಿದ್ದರಾಮಯ್ಯ ಕಾಂಗ್ರೆಸ್‌ಗೆ ಹೋಗಿ, ಎಲ್ಲರನ್ನೂ ಮುಗಿಸಿದ್ದಾರೆ, ಈಗ ಡಿ.ಕೆ ಶಿವಕುಮಾರ್ ಅವರನ್ನೂ ಮುಗಿಸಿಬಿಡ್ತಾರೆ.ಇವರ ಒಳಜಗಳದಿಂದ ಬಿಜೆಪಿ ಪಕ್ಷಕ್ಕೆ 50 ಕ್ಕೂ ಹೆಚ್ಚಿನ ಸೀಟು ಬರಲಿದೆ ಎಂದು ಹೇಳಿದ್ದಾರೆ.

ಹಿಂದುಳಿದವರಿಗೆ ಮೊದಲು ಅನ್ಯಾಯ ಮಾಡಿದ ಸಿಎಂ ಎಂದರೆ ಅದು ಸಿದ್ದರಾಮಯ್ಯ ಆದರೆ ಬಿಜೆಪಿ ಹಾಗೆ ಮಾಡಲ್ಲ, ಈಗಿರೋದಕ್ಕಿಂತ ಅತಿ ಹೆಚ್ಚು ಶೇಕಡವಾರು ಮೀಸಲಾತಿಯನ್ನಹಿಂದುಳಿದ ವರ್ಗಗಳಿಗೆ ನೀಡುತ್ತೇವೆ. ಯಾವ ಸಮುದಾಯಕ್ಕೆ ನ್ಯಾಯ ಸಿಕ್ಕಿಲ್ಲ, ಆ ಸಮುದಾಯವನ್ನೇ ಗುರುತಿಸಿ ಮಾಡಿ ಅವರಿಗೆ ಮೀಸಲಾತಿ ನೀಡುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!