February 1, 2026

ಗೂಗಲ್ ಟ್ರಾನ್ಸ್ ಲೇಶನ್ ಗೆ ಕೊಂಕಣಿ ಭಾಷೆ ಸೇರ್ಪಡೆ

0
image_editor_output_image903789089-1652418629763.jpg

ಬೆಂಗಳೂರು: ಅಂತರ್ಜಾಲ ಆಧಾರಿತ ಭಾಷಾಂತರ ಅಪ್ಲಿಕೇಶನ್ ಆದ ಗೂಗಲ್ ಟ್ರಾನ್ಸ್ ಲೇಶ ನ್ ಗೆ ಹೊಸದಾಗಿ ಕೊಂಕಣಿ ಯನ್ನು ಸೇರಿಸಿಕೊಳ್ಳಲಾಗಿದೆ ಎಂದು ಗೂಗಲ್ ಸಂಸ್ಥೆ ಪ್ರಕಟನೆ ನೀಡಿದೆ.

ಈಗಾಗಲೇ 100ಕ್ಕೂ ಅಧಿಕ ಭಾಷೆಗಳು ಗೂಗಲ್ ಟ್ರಾನ್ಸ್​ಲೇಟ್​ನಲ್ಲಿದ್ದು, ಭಾರತೀಯ ಭಾಷೆಗಳಿಗೂ ಗೂಗಲ್ ಮಾನ್ಯತೆ ನೀಡಿದೆ.ಇದೀಗ ಗೂಗಲ್ ಟ್ರಾನ್ಸ್​ಲೇಟ್​​ನಲ್ಲಿ ಹೊಸದಾಗಿ ಭಾರತೀಯ ಭಾಷೆಗಳಾದ ಅಸ್ಸಾಮಿ, ಭೋಜ್​ಪುರಿ, ಡೋಗ್ರ, ಕೊಂಕಣಿ, ಮೈಥಿಲಿ, ಮಣಿಪುರಿ ಮತ್ತು ಮಿಜೋ ಭಾಷೆಗಳು ಸೇರ್ಪಡೆಗೊಂಡಿದೆ.

ಗೂಗಲ್ ಟ್ರಾನ್ಸ್​ಲೇಟ್​​ನಲ್ಲಿ ಕೊಂಕಣಿ ಸೇರ್ಪಡೆ ಮಾಡಿರುವ ಕುರಿತು ಕೊಂಕಣಿ ಭಾಷಾ ಪ್ರೇಮಿಗಳು ಗೂಗಲ್‌ನ ಪ್ರಯತ್ನವನ್ನು ಶ್ಲಾಘಿಸಿದ್ದಾರೆ. ಕೊಂಕಣಿಯನ್ನು ಗೋವಾ, ಕರ್ನಾಟಕ ಕರಾವಳಿಯಲ್ಲಿ ಮತ್ತು ಮಹಾರಾಷ್ಟ್ರದ ಹಲವು ಭಾಗಗಳಲ್ಲಿ ವ್ಯಾಪಕವಾಗಿ ಮಾತನಾಡುತ್ತಾರೆ.

Leave a Reply

Your email address will not be published. Required fields are marked *

error: Content is protected !!