February 1, 2026

ಸುಂದರವಾಗಿಲ್ಲ ಎಂದ ಪತಿ: ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಪತ್ನಿ

0
image_editor_output_image1366559236-1652334052102.jpg

ಬೆಂಗಳೂರು: ಕಪ್ಪಾಗಿದಿಯಾ ನೋಡಲು ಸುಂದರವಾಗಿಲ್ಲ ಎಂದು ಪತಿಯು ಕಿರುಕುಳ ನೀಡುತ್ತಿದ್ದು, ಇದಕ್ಕೆ ಬೇಸತ್ತ ಮಹಿಳೆಯೊಬ್ಬರು ಮೈಮೇಲೆ ಸ್ಯಾನಿಟೈಸರ್‌ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆರ್‌.ಟಿ.ನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಮೃತ ಮಹಿಳೆಯನ್ನು ಆರ್‌ಟಿ ನಗರದ ಮಠದ ಹಳ್ಳಿಯ ನಿವಾಸಿ ಶಾಜಿಯಾ ಬಾನು ಎಂದು ಗುರುತಿಸಲಾಗಿದ್ದು, ಆಕೆಯ ಪತಿ ಇಮ್ರಾನ್‌ ವಿರುದ್ಧ ಆರ್‌.ಟಿ.ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನು ಕಳೆದ 8 ವರ್ಷಗಳ ಹಿಂದೆ ಇಮ್ರಾನ್‌ ಹಾಗೂ ಶಾಜಿಯಾ ವಿವಾಹವಾಗಿ ಆರ್‌.ಟಿ.ನಗರದಲ್ಲಿ ವಾಸವಾಗಿದ್ದು, ಈ ದಂಪತಿಗೆ ಮೂವರು ಮಕ್ಕಳಿದ್ದಾರೆ.

ನೀನು ಕಪ್ಪಾಗಿದ್ದೀಯಾ, ಸುಂದರವಾಗಿಲ್ಲ ಎಂದು ಕಿರುಕುಳ ಕೊಡುತ್ತಿದ್ದು, ಅದಕ್ಕೆ ಇಮ್ರಾನ್‌ ತಾಯಿ ಕೂಡ ಪುತ್ರನಿಗೆ ಸಹಕಾರ ನೀಡುತ್ತಿದ್ದರು. ಇತ್ತ ಪತಿಯ ಕಿರುಕುಳದಿಂದ ನೊಂದ ಶಾಜಿಯಾ ಏ.20ರಂದು ಮನೆಯಲ್ಲಿದ್ದ ಸ್ಯಾನಿಟೈಸರ್‌ನ್ನು ಮೈ ಮೇಲೆ ಸುರಿದುಕೊಂಡು ಬೆಂಕಿ ಹಚ್ಚಿ ಆತ್ಮಹತ್ಯೆಗೆ ಯತ್ನಿಸಿದ್ದರು.

ಪತಿ ಹಾಗೂ ಕುಟುಂಬ ಸ್ಥರು ಕೂಡಲೇ ಶಾಜಿಯಾಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫ‌ಲಕಾರಿಯಾಗದೆ ಶಾಜಿಯಾ ಮೃತ ಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!