March 22, 2026

ಮಣಿಪಾಲ: ಸಿಟಿ ಬಸ್ ಗೆ ಢಿಕ್ಕಿ, ಕಾರು ಚಾಲಕ ಗಂಭೀರ, ಆಸ್ಪತ್ರೆಗೆ ದಾಖಲು

0
image_editor_output_image-615378297-1652076701187.jpg

ಮಣಿಪಾಲ:  ಈಶ್ವರನಗರದ ಹೆದ್ದಾರಿಯ ಯೂಟರ್ನ್ ನಲ್ಲಿ ಕಾರೊಂದು ಖಾಸಗಿ ಸಿಟಿ ಬಸ್ ಗೆ ಢಿಕ್ಕಿ ಹೊಡೆದ ಪರಿಣಾಮ ಕಾರು ಚಾಲಕನ ತಲೆಗೆ ಗಂಭೀರ ಗಾಯವಾಗಿದ್ದು ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪರ್ಕಳ ಕಡೆಯಿಂದ ಉಡುಪಿಗೆ ಸಾಗುತ್ತಿದ್ದ ಸಿಟಿ ಬಸ್ ಗೆ ಅತಿವೇಗದಿಂದ ಹಿಂದಿನಿಂದ ಬಂದು ಹೊಡೆದ ಕಾರ್ ಸಂಪೂರ್ಣ ಜಖಂಗೊಂಡಿದೆ. ಸ್ಥಳಕ್ಕೆ ಮಣಿಪಾಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಖಾಸಗಿ ಬಸ್ ನ ಹಿಂಭಾಗವೂ ನಜ್ಜುಗುಜ್ಜಾಗಿದೆ.

Leave a Reply

Your email address will not be published. Required fields are marked *

error: Content is protected !!