March 21, 2026

ಕಾಸರಗೋಡು: ಮೀನು ಮಾರುಕಟ್ಟೆಗೆ ಅಧಿಕಾರಿಗಳ ದಾಳಿ: 200 ಕೆ.ಜಿ ಕೊಳೆತ ಮೀನುಗಳು ಪತ್ತೆ

0
n3840745741651932464199e9dcdd597d3dee37e1e7c7733b6e7ed7d8d1b9db56c5297c23378ca088f8ac8e.jpg

ಕಾಸರಗೋಡು: ನಗರದ ಮಾರುಕಟ್ಟೆಯಿಂದ ಎರಡು ಕ್ವಿಂಟಾಲ್ ಹಳಸಿದ ಮೀನುಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಆಹಾರ ಸುರಕ್ಷಾ ಇಲಾಖೆ , ಆರೋಗ್ಯ ಇಲಾಖೆ ಹಾಗೂ ಕಾಸರಗೋಡು ನಗರಸಭೆಯ ಅಧಿಕಾರಿಗಳು ಶನಿವಾರ ಬೆಳಿಗ್ಗೆ ಮಾರುಕಟ್ಟೆಗೆ ತೆರಳಿ ತಪಾಸಣೆ ನಡೆಸಿದ್ದು, ಭಾರೀ ಪ್ರಮಾಣದ ಕೊಳೆತ ಮೀನುಗಳನ್ನು ವಶಪಡಿಸಿಕೊಂಡಿದ್ದಾರೆ.

ತಮಿಳುನಾಡಿನಿಂದ ಈ ಮೀನನ್ನು ಕಾಸರಗೋಡು ಮಾರುಕಟ್ಟೆಗೆ ತಲಪಿಸಲಾಗಿತ್ತು. 50ಬಾಕ್ಸ್ ಮೀನುಗಳಲ್ಲಿ 8 ಬಾಕ್ಸ್ ಮೀನು ಕೊಳೆತಿರುವುದು ಕಂಡುಬಂದಿದೆ. ಈ ಮೀನನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿತ್ತು. ಇದು ಮಾತ್ರವಲ್ಲ ಈ ಮೀನಿಗೆ ಮಾರಕ ರಾಸಾಯನಿಕ ಪದಾರ್ಥ ಬೆರೆಸಿರುವುದು ಪತ್ತೆಯಾಗಿದೆ.

ಇನ್ನು ರಾಸಾಯನಿಕ ಬೆರಕೆಯ ಮೀನುಗಳನ್ನು ಮಾರಾಟ ಮಾಡಲಾಗುತ್ತಿದೆ ಎಂಬ ದೂರಿನ ಹಿನ್ನಲೆಯಲ್ಲಿ ಅಧಿಕಾರಿಗಳು ದಾಳಿ ನಡೆಸಿ ತಪಾಸಣೆ ನಡೆಸಿದ್ದು, ಮುಂದಿನ ದಿನಗಳಲ್ಲೂ ಈ ಬಗ್ಗೆ ನಿಗಾ ಇರಿಸಲಾಗುವುದು. ತಪಾಸಣೆ ನಡೆಸಲು ಅಧಿಕಾರಿಗಳು ತೀರ್ಮಾನಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!