ಮೇ 10ರಂದು ಮಡವೂರು ಸಿ.ಎಂ ಮಖಾಂ ಉರೂಸ್
ವಿಟ್ಲ: ದಕ್ಷಿಣ ಭಾರತದ ಸುಪ್ರಸಿದ್ದ ಝಿಯಾರತ್ ಕೇಂದ್ರವಾದ ಕೇರಳದ ಮಡವೂರು ಸಿ.ಎಂ ಮಖಾಂ ಶರೀಫಿನಲ್ಲಿ ಅಂತ್ಯ ವಿಶ್ರಾಂತಿ ಹೊಂದುತ್ತಿರುವ ವಲಿಯುಲ್ಲಾಹಿ ಸಿ.ಎಂ ಮಹಮ್ಮದ್ ಅಬೂಬಕ್ಕರ್ ಮುಸ್ಲಿಯಾರ್ ಅವರ ೩೨ನೇ ಉರೂಸ್ ಮುಬಾರಕ್ ಮೇ ೫ ರಂದು ಪ್ರಾರಂಭಗೊಂಡಿದ್ದು, ಮೇ ೧೦ ರ ವರೆಗೆ ನಡೆಯಲಿದೆ ಎಂದು ಅನಿಲಕಟ್ಟೆ ಸಿ.ಎಂ ಮಡವೂರು ಎಜ್ಯುಕೇಶನ್ ಮತ್ತು ಕಲ್ಚಿರಲ್ ಕಾಂಪ್ಲೆಕ್ಸ್ ಜತೆ ಕನ್ವಿನರ್ ಅಬೂಬಕ್ಕರ್ ಅನಿಲಕಟ್ಟೆ ತಿಳಿಸಿದರು.
ವಿಟ್ಲದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಮಖಾಂ ಝಿಯಾರತ್, ಧ್ವಜರೋಹಣ, ಖತ್ಮುಲ್ ಕುರ್ ಆನ್, ಸ್ವಲಾತ್ ಮಜ್ಲಿಸ್, ಮಜ್ಲಿಸುನ್ನೂರು, ಮತಪ್ರಭಾಷಣ, ಅನುಸ್ಮರಣೆ , ದಿಕ್ರ್, ದುಆ ಸಮ್ಮೇಳನ, ಅನ್ನದಾನ ಮುಂತಾದ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಮೇ ೧೦ ರಂದು ಬೆಳಿಗ್ಗೆ ೫ ಗಂಟೆಯಿಂದ ಸಂಜೆ ೫ ರ ತನಕ ಅನ್ನದಾನ ನಡೆಯಲಿದೆ ಎಂದ ಅವರು ಎಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ಸಿ.ಎಚ್ ಇಬ್ರಾಹಿಂ ಮುಸ್ಲಿಯಾರ್ ಮನವಿ ಮಾಡಿದರು.
ಈ ಸಂದರ್ಭ ಸಯ್ಯದ್ ಹುಸೈನ್ ಬಾಅಲವಿ ತಂಙಳ್, ಅನಿಲಕಟ್ಟೆ ಮಡವೂರ್ ಸಿ.ಎಂ.ಎಜುಕೇಶನ್ ಕಲ್ಚರಲ್ ಕಾಂಪ್ಲೆಕ್ಸ್ ನ ಕನ್ವಿನರ್
ಪಿ.ಎ ಮುಹಮ್ಮದ್ ಮುಸ್ಲಿಯಾರ್, ಜತೆ ಕನ್ವಿನರ್ ಕೆ.ಎ ಹಸೈನಾರ್ ಮುಸ್ಲಿಯಾರ್, ಮುಹಮ್ಮದ್ ಮುಸ್ಲಿಯಾರ್, ಉಪಸ್ಥಿತರಿದ್ದರು.




