July 5, 2026

ತುಮಕೂರು: ಹಸು ಮೈ ತೊಳೆಯಲು ಹೋದ ತಾತ, ಮೊಮ್ಮಗ ನೀರಿನಲ್ಲಿ ಮುಳುಗಿ ಮೃತ್ಯು

0
Screenshot_2022-05-05-10-14-11-57_680d03679600f7af0b4c700c6b270fe7.jpg

ತುಮಕೂರು: ಶಿರಾ ತಾಲ್ಲೂಕಿನ ಕುಂಟೆಗೌಡನಹಳ್ಳಿ ಗ್ರಾಮದ ಕಟ್ಟೆಯಲ್ಲಿ ಬುಧವಾರ ಸಂಜೆ ಹಸು ಮೈ ತೊಳೆಯಲು ಹೋಗಿ ತಾತ ಹಾಗೂ ಮೊಮ್ಮಗ ಕಾಲು ಜಾರಿ ನೀರಿನಲ್ಲಿ ಬಿದ್ದು ಮೃತಪಟ್ಟಿದ್ದಾರೆ.

ಕುಂಟೆಗೌಡನಹಳ್ಳಿ ಗ್ರಾಮದ ಕರಿಯಣ್ಣ (60) ಹಾಗೂ ಮೊಮ್ಮಗ ದಿಲೀಪ್ (12) ಮೃತರು. ಹಸುಗಳಿಗೆ ಕಟ್ಟೆಯಲ್ಲಿ ಮೈ ತೊಳೆಯುತ್ತಿದ್ದ ಸಮಯದಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಮೊಮ್ಮಗ ದಿಲೀಪ್ ನೀರಿನಲ್ಲಿ ಬಿದ್ದಿದ್ದಾನೆ. ಮೊಮ್ಮಗನನ್ನು ಕಾಪಾಡಲು ತಾತ ಕರಿಯಣ್ಣ ಸಹ ನೀರಿಗೆ ದುಮುಕಿದ್ದು ಕೆಸರಿನಲ್ಲಿ ಸಿಲುಕಿ ಇಬ್ಬರು ಮೃತ ಪಟ್ಟಿದ್ದಾರೆ.

ಕುಟು‌ಂಬದವರ ಅಕ್ರಂದನ‌ ಮುಗಿಲು ಮಟ್ಟಿತ್ತು. ಕಳ್ಳಂಬೆಳ್ಳ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!