June 26, 2026

ಪುತ್ತೂರು: ಕಾರು ಮತ್ತು ಆಕ್ಟಿವಾ ನಡುವೆ ಭೀಕರ ಅಪಘಾತ:
ಸವಾರ ಸ್ಥಳದಲ್ಲೇ ಮೃತ್ಯು

0
image_editor_output_image-2039691549-1635767966224

ಪುತ್ತೂರು: ಕಾರು ಮತ್ತು ಆಕ್ಟಿವಾ ನಡುವೆ ಭೀಕರ ಅಪಘಾತ ಸಂಭವಿಸಿ ಆಕ್ಟಿವಾ ಸವಾರ ಸಾವನ್ನಪ್ಪಿದ ಘಟನೆ ನರಿಮೊಗರು ಗ್ರಾಮದ ಕೊಡಿನೀರು ಎಂಬಲ್ಲಿ ನಡೆದಿದೆ.

ಪುತ್ತೂರಿನಿಂದ ಸವಣೂರು ಕಡೆ ತೆರಳುತ್ತಿದ್ದ ಡಿಸೈರ್ ಕಾರು ಮತ್ತು ಸವಣೂರು ನಿಂದ ಪುತ್ತೂರು ಕಡೆ ಬರುತ್ತಿದ್ದ ಆಕ್ಟಿವಾ ನಡುವೆ ಅಪಘಾತ ಸಂಭವಿಸಿದ್ದು, ಜೀವನ್ಮರಣ ಸ್ಥಿತಿಯಲ್ಲಿದ್ದ ಆಕ್ಟಿವಾ ಸವಾರನನ್ನು ಶೀಘ್ರವಾಗಿ ಅರುಣ್ ಕುಮಾರ್ ಪುತ್ತಿಲರವರು ಕರೆ ತಂದಿದ್ದು, ಮುಕ್ವೆ ಎಂಬಲ್ಲಿ ಆಂಬ್ಯುಲೆನ್ಸ್ ಗೆ ಶಿಫ್ಟ್ ಆಸ್ಪತ್ರೆಗೆ ಕರೆತರುವ ವೇಳೆ ಅವರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಮೃತರು ಪೇರಮೊಗರಿನ ಸೋಮಶೇಖರ್ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!