March 23, 2026

ಸಿಲಿಂಡರ್‌ಗಳ ಬೆಲೆಯಲ್ಲಿ ಮತ್ತೆ 102.50 ರೂ. ಏರಿಕೆ

0
Screenshot_2022-05-01-11-26-19-01_680d03679600f7af0b4c700c6b270fe7.jpg

ನವದೆಹಲಿ: ಅಗತ್ಯ ಇಂಧನಗಳ ಬೆಲೆ ಏರಿಕೆ ನಿರಂತರವಾಗಿ ಆಗುತ್ತಿದ್ದು, ಇದೀಗ ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ಗಳ ಮೇಲೂ ಬೆಲೆ ಏರಿಕೆ ಬಿಸಿ ತಟ್ಟಿದೆ. ಈ ಸಿಲಿಂಡರ್‌ಗಳ ಬೆಲೆಯಲ್ಲಿ 102.50 ರೂಪಾಯಿ ಏರಿಕೆ ಮಾಡಲಾಗಿದೆ.

ಈ ಹಿಂದೆ ಫೆಬ್ರವರ ಮಾಸಾರಂಭದಲ್ಲಿ ಬಜೆಟ್ ದಿನದಂದು ಈ ಸಿಲಿಂಡರ್‌ಗಳ ಬೆಲೆಯಲ್ಲಿ 91.50 ರೂ. ಇಳಿಕೆಯಾಗಿತ್ತು. ಆ ಬಳಿಕ ಮಾರ್ಚ್ 1ರಂದು ಎಲ್ಪಿಜಿ ಸಿಲಿಂಡರಿನ ಬೆಲೆ 105 ರೂ. ಏರಿಕೆ ಕಂಡಿತ್ತು.

ಏಪ್ರಿಲ್ 1ರಂದು ಪುನಃ 250 ರೂಪಾಯಿ ಏರಿಕೆಯಾಗಿತ್ತು. ಇದೀಗ ಕಾರ್ಮಿಕರ ದಿನವಾದ ಮೇ 1ರಂದು ನಾಲ್ಕನೇ ಬಾರಿಗೆ ದರ ಏರಿಕೆಯಾಗಿದ್ದು, ಈ ಬಾರಿ 102.50 ರೂ.ಗಳಷ್ಟು ಏರಿಕೆ ಕಂಡಿದೆ.

ನಾಲ್ಕು ತಿಂಗಳಿಂದ ಪ್ರತಿ ತಿಂಗಳ ಮೊದಲ ದಿನವೇ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ದರ ಏರಿಕೆಯಾಗುತ್ತಿದ್ದು, ಇದರಿಂದ ಗ್ರಾಹಕರ ಜೇಬಿಗೆ ಕತ್ತರಿ ಬೀಳಲಿದೆ.

ದರ ಏರಿಕೆಯಿಂದಾಗಿ ಸಹಜವಾಗಿ ಹೊಟೇಲ್‌ಗಳಲ್ಲಿ ಚಾತಿಂಡಿ, ಊಟದ ಬೆಲೆ ಏರಿಕೆಯಾಗುವುದರಿಂದ ಗ್ರಾಹಕರು ಹೈರಾಣಾಗಲಿದ್ದಾರೆ ಎಂದು ವರದಿಗಳು ತಿಳಿಸಿವೆ.

Leave a Reply

Your email address will not be published. Required fields are marked *

error: Content is protected !!