March 23, 2026

ಶಿಯೊಮಿ ಇಂಡಿಯಾ ಕಂಪನಿಯ ಬರೋಬ್ಬರಿ 5,551 ಕೋಟಿ ರೂ. ಹಣ ಜಪ್ತಿ

0
image_editor_output_image558402914-1651360294876.jpg

ನವದೆಹಲಿ: ವಿದೇಶಿ ವಿನಿಮಯ ನಿಯಮ ಉಲ್ಲಂಘನೆ ಹಾಗೂ ಕಾನೂನುಬಾಹಿರ ಹಣ ವರ್ಗಾವಣೆಯಲ್ಲಿ ತೊಡಗಿದ ಆರೋಪದಡಿ ಜಾರಿ ನಿರ್ದೇಶನಾಲಯವು (ಇ.ಡಿ) ಚೀನಾ ಮೂಲದ ಎಂಐ ಸ್ಮಾರ್ಟ್ಫೋನ್ಗಳನ್ನು ತಯಾರಿಸುವ ಚೀನಾ ಮೂಲದ ಶಿಯೊಮಿ ಇಂಡಿಯಾ ಕಂಪನಿಯ ಸುಮಾರು 5,551 ಕೋಟಿ ರೂ. ಹಣವನ್ನು ಜಪ್ತಿ ಮಾಡಿದೆ. ಫಾರಿನ್ ಎಕ್ಸ್ಚೇಂಜ್ ಮ್ಯಾನೇಜ್ಮೆಂಟ್ ಆಕ್ಟ್ 1999ರ ಪ್ರಕಾರ ಕೇಸ್ ದಾಖಲಿಸಿಕೊಂಡು ಈ ಭಾರಿ ಮೊತ್ತದ ಆಸ್ತಿ ವಶಕ್ಕೆ ಪಡೆಯಲಾಗಿದೆ.

ಶಿಯೊಮಿ ಜೊತೆ ಸಂಪರ್ಕ ಹೊಂದಿರುವ ವಿದೇಶದ ಮೂರು ಕಂಪನಿಗಳಿಗೆ ಶಿಯೊಮಿ ಇಂಡಿಯಾ ಭಾರಿ ಮೊತ್ತದ ಅಕ್ರಮ ವಹಿವಾಟು ನಡೆಸಿದ ಶಂಕೆ ಹಿನ್ನೆಲೆಯಲ್ಲಿ ಈ ವರ್ಷದ ಫೆಬ್ರವರಿಯಲ್ಲಿ ಜಾರಿ ನಿರ್ದೇಶನಾಲಯವು ತನಿಖೆ ಕೈಗೊಂಡಿತ್ತು. ಶಿಯೊಮಿ ಕಂಪನಿಯು ಭಾರತದಲ್ಲಿ 2014ರಲ್ಲಿ ಕಾರ್ಯಾಚರಣೆ ಆರಂಭಿಸಿದ್ದು, 2015ರಿಂದ ಹಣ ಪಾವತಿ ಆರಂಭಿಸಿತ್ತು.

5,551.27 ಕೋಟಿ ರೂಪಾಯಿಗೆ ಸಮನಾದ ವಿದೇಶಿ ಕರೆನ್ಸಿಯನ್ನು ಶಿಯೊಮಿ ಇಂಡಿಯಾ ಸಂಸ್ಥೆಯು ತನ್ನ ಚೀನಿ ಮಾತೃಸಂಸ್ಥೆಯ ಸೂಚನೆ ಮೇರೆಗೆ ರಾಯಲ್ಟಿ ಎಂದು ಸಂಬಂಧವಿಲ್ಲದ ಮೂರು ಕಂಪನಿಗಳಿಗೆ ಪಾವತಿಸಿದೆ.

ಅಲ್ಲದೆ ಹೀಗೆ ಹಣ ಪಾವತಿಸಲಾಗಿರುವ ವಿದೇಶಿ ಕಂಪನಿಗಳಿಂದ ಈ ಕಂಪನಿಯು ಯಾವುದೇ ಸೇವೆ ಪಡೆದಿಲ್ಲ ಹಾಗೂ ಈ ವಹಿವಾಟಿನ ವೇಳೆ ಬ್ಯಾಂಕ್ಗಳಿಗೂ ದಾರಿ ತಪ್ಪಿಸುವಂಥ ಮಾಹಿತಿ ನೀಡಿದೆ ಎಂಬುದೂ ತಿಳಿದು ಬಂದಿದೆ. ಹೀಗಾಗಿ ಜಾರಿ ನಿರ್ದೇಶನಾಲಯವು ಈ ಕ್ರಮಕೈಗೊಂಡಿದ್ದು, ತನಿಖೆ ಜಾರಿಯಲ್ಲಿದೆ.

Leave a Reply

Your email address will not be published. Required fields are marked *

error: Content is protected !!