March 19, 2026

ಬಂಟ್ವಾಳ: ಮನೆಯಂಗಳದಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ವಯರ್ ತುಳಿದು ಮಹಿಳೆ ಸಾವು

0
image_editor_output_image45836283-1651215595796.jpg

ಬಂಟ್ವಾಳ: ವಿದ್ಯುತ್ ಶಾಕ್ ಹೊಡೆದು ಮಹಿಳೆಯೋರ್ವಳು ಮೃತಪಟ್ಟ ದಾರುಣ ಘಟನೆ ನಿನ್ನೆ ಸಂಜೆ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ ಕಾಡುಬೆಟ್ಟು ಎಂಬಲ್ಲಿ ನಡೆದಿದೆ.

ಕಾಡುಬೆಟ್ಟು ಕ್ರಾಸ್ ನಿವಾಸಿ ಮಂಜುನಾಥ ಅವರ ಪತ್ನಿ ಭಾಗೀರಥಿ ಮೃತಪಟ್ಟ ಮಹಿಳೆ.

ನಿನ್ನೆ ಸಂಜೆ ಸುಮಾರು 6.30 ಗಂಟೆಗೆ ಭಾಗೀರಥಿ ಮನೆಯಂಗಳದಲ್ಲಿ ತುಂಡಾಗಿ ಬಿದ್ದ ವಯರ್ ನ್ನು ತುಳಿದ ಪರಿಣಾಮ ವಿದ್ಯುತ್ ಹರಿದು ಮಹಿಳೆ ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ.

ಘಟನಾ ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ಎಸ್. ಐ.ಹರೀಶ್, ಮಹಿಳಾ ಪಿ.ಎಸ್.ಐ.ಭಾರತಿ ಭೇಟಿ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!