March 24, 2026

ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮಿ ವಿರುದ್ಧ ಮಹಿಳೆಯಿಂದ ಪೊಲೀಸ್ ದೂರು

0
Screenshot_2022-04-25-11-48-23-46_680d03679600f7af0b4c700c6b270fe7.jpg

ಬೆಂಗಳೂರು: ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳು ಮತ್ತು ಇತರ ಪದಾಧಿಕಾರಿಗಳು ತಮ್ಮ ಕುಟುಂಬ ಸದಸ್ಯರಿಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ 51 ವರ್ಷದ ಮಹಿಳೆಯೊಬ್ಬರು ಆರ್‌ಟಿ ನಗರ ಪೊಲೀಸರಿಗೆ ಶನಿವಾರ ದೂರು ನೀಡಿದ್ದಾರೆ.

ತಿಮ್ಮಯ್ಯ ಗಾರ್ಡನ್‌ನ ನಿವಾಸಿ ಶಿಲ್ಪಾ ಟಿ.ಎಸ್ ದೂರು ನೀಡಿದ್ದು, ಮಠಕ್ಕೆ 15 ವರ್ಷಗಳಿಂದ ಕೆಲಸ ಮಾಡಿದ ಪತಿ ಸಿದ್ದೇಶ್ ವಿರುದ್ಧ ಮಠದ ಕಾರ್ಯದರ್ಶಿ ವಿಶ್ವನಾಥ್ ಮತ್ತು ನೌಕರ ಮರಳು ಸಿದ್ದಪ್ಪ ಪಿತೂರಿ ನಡೆಸಿ ಇತ್ತೀಚೆಗೆ ಯಾವುದೇ ಕಾರಣವಿಲ್ಲದೆ ವಜಾಗೊಳಿಸಿದ್ದಾರೆ ಎಂದು ದೂರಿದ್ದಾರೆ..

ಮಠದ ಸ್ವಾಮೀಜಿ ಮತ್ತು ಇತರ ಪದಾಧಿಕಾರಿಗಳು ತಮ್ಮ ವಿರುದ್ಧ ಸುಳ್ಳುಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ ಎಂದು ಶಿಲ್ಪಾ ಆರೋಪಿಸಿದ್ದಾರೆ. ಈಗಾಗಲೇ ಶ್ರೀಗಳು ತಮಗೆ ಜೀವ ಬೆದರಿಕೆ ಹಾಕಿದ್ದಾರೆ, ತಮ್ಮ ಪತಿಯನ್ನು ಮುಗಿಸುವುದಾಗಿ ಹೇಳಿದ್ದಾರೆ,ಇದರಿಂದ ತಮಗೆ ಆತಂಕ ಎದುರಾಗಿದೆ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!