ಹಿಂದೂ ಮಹಿಳೆಯ ಶವದ ಅಂತ್ಯಸಂಸ್ಕಾರ ಮಾಡಿದ ಮುಸ್ಲಿಮರು
ಮೈಸೂರು: ಮೈಸೂರಿನಲ್ಲಿ ಮುಸ್ಲಿಮರು 60 ವರ್ಷದ ಹಿಂದೂ ಮಹಿಳೆಯ ಶವಕ್ಕೆ ಹೆಗಲು ಕೊಟ್ಟು ಅಂತ್ಯ ಸಂಸ್ಕಾರ ನಡೆಸುವ ಮೂಲಕ ಕೋಮು ಸೌಹಾರ್ದತೆ ಮೆರೆದಿದ್ದಾರೆ.
ಮುಸ್ಲಿಂ ಜನಸಂಖ್ಯೆಯ ಪ್ರಾಬಲ್ಯವಿರುವ ಗೌಸಿಯಾನಗರದ ನಿವಾಸಿಯಾಗಿದ್ದ ಹಿಂದೂ ಮಹಿಳೆ ಜಯಕ್ಕ(60) ಅವರು ಶುಕ್ರವಾರ ತೀವ್ರ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಈ ಮಹಿಳೆ ಪತಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.
ಜಯಕ್ಕನ ಮೃತದೇಹವನ್ನು ಹೊತ್ತು ಮೆರವಣಿಗೆಯಲ್ಲಿ ಸಾಗಿದ ಮುಸ್ಲಿಂ ಬಾಂಧವರು, ಅವರೇ ಗುಂಡಿ ತೆಗೆದು ಹಿಂದೂ ಧರ್ಮದ ವಿಧಿವಿಧಾನಗಳ ಪ್ರಕಾರ ಅಂತ್ಯಸಂಸ್ಕಾರ ನಡೆಸಿದರು.




