ಸುರತ್ಕಲ್: ಎರಡು ವರ್ಷದ ಮಗುವಿನೊಂದಿಗೆ ತಾಯಿ ನಾಪತ್ತೆ
ಮಂಗಳೂರು: ತನ್ನ ಎರಡು ವರ್ಷದ ಮಗುವಿನೊಂದಿಗೆ ತಾಯಿ ನಾಪತ್ತೆಯಾದ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾಳಮ್ಮ ಯಾನೆ ಮೇಘ(22) ಹಾಗೂ 2 ವರ್ಷದ ಮಗು ನಾಪತ್ತೆಯಾಗಿದೆ.
ದೂರಿನ ವಿವರ
ಮೂಲತಃ ಗದಗ ಜಿಲ್ಲೆಯ ರೋಣ ತಾಲೂಕು ನಾಗರಸಿಕೊಪ್ಪದ ಬಸವರಾಜ್ ಪಾಟಿಲ್ ಸುರತ್ಕಲ್ ಗ್ರಾಮದ ತಡಂಬೈಲ್‌ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.
ಏ.8ರಂದು ಬೆಳಿಗ್ಗೆ 8 ಗಂಟೆಗೆ ಬಸವರಾಜ್ ಪಾಟಿಲ್ ಕೆಲಸಕ್ಕೆ ತೆರಳಿ ಚಹಾ ವಿರಾಮದ ವೇಳೆ ಮನೆಗೆ ಬಂದಾಗ ಮನೆಯಲ್ಲಿದ್ದ ಪತ್ನಿ ಮೇಘ ಹಾಗೂ 2 ವರ್ಷದ ಮಗು ನಾಪತ್ತೆಯಾಗಿದೆ. ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.
ಕಾಣೆಯಾದವರ ಚಹರೆ:
ಹೆಸರು : ಶ್ರೀಮತಿ ಬಾಳಮ್ಮ ಯಾನೆ ಮೇಘಾ
ಪ್ರಾಯ: 25 ವರ್ಷ
ಎತ್ತರ : 4.2 ಅಡಿ
ಗೋಧಿ ಮೈಬಣ್ಣ, ಕಪ್ಪು ಕೂದಲು, ದುಂಡು ಮುಖ
ಭಾಷೆ- ಕನ್ನಡ ಮಾತನಾಡುತ್ತಾರೆ.
ಧರಿಸಿದ ಬಟ್ಟೆಗಳು : ಹಸಿರು ಬಣ್ಣದ ನೈಟಿ ಧರಿಸಿರುತ್ತಾರೆ




