ಸುಳ್ಯ: ಗ್ರಾಮೀಣ ರಸ್ತೆ ಮಧ್ಯೆ ಮೃತಪಟ್ಟ ಚಿರತೆ ಮರಿ: ವಾಹನ ಗುದ್ದಿರಬಹುದೆಂಬ ಶಂಕೆ
ಸುಳ್ಯ: ತಾಲೂಕು ನಾರ್ಕೋಡು ಕೋಲ್ಚಾರು ರಸ್ತೆ ಮಧ್ಯೆ ಏಣಾವರ ಎಂಬಲ್ಲಿ ನಿನ್ನೆ ರಾತ್ರಿ ಮೃತ ಪಟ್ಟ ಚಿರತೆಮರಿಯೊಂದು ಕಂಡು ಬಂದಿದೆ.
ರಾತ್ರಿ ಸಮಯದಲ್ಲಿ ಚಿರತೆ ಸಂಚಾರ ಈ ರಸ್ತೆಯಲ್ಲಿ ಹೆಚ್ಚಾಗಿ ಕಂಡು ಬಂದಿರುವ ಬಗ್ಗೆ ಹಿಂದೆ ಪ್ರತ್ಯಕ್ಷ ದರ್ಶಿಗಳು ತಿಳಿಸಿರುತ್ತಾರೆ. ಈ ರಸ್ತೆಯು ಕೇರಳ ಬಂದಡ್ಕ ಕಡೆಗೆ ಸಂಪರ್ಕಿಸುವ ಕಾರಣದಿಂದ ರಾತ್ರಿ ವೇಳೆಯಲ್ಲಿ ವಾಹನ ಸಂಚಾರ ಅಧಿಕವಾಗಿರುತ್ತದೆ. ಇದರಿಂದಾಗಿ ಒಮ್ಮೆಗೆ ಚಿರತೆಯು ರಸ್ತೆ ದಾಟುವ ಸಂದರ್ಭ ವಾಹನದಡಿ ಸಿಲುಕಿ ಮೃತಪಟ್ಟಿರಬಹುದು ಎಂದು ಅಂದಾಜಿಸಲಾಗಿದೆ.




